ಶ್ರೀ ಲಲಿತಾ ಸಹಸ್ರನಾಮಾವಳಿಃ

ಮೌಲ್ಯಮಾಪನವಿಲ್ಲ
0 ವೀಕ್ಷಣೆಗಳು

1. ಓಂ ಐಂ ಹ್ರೀಂ ಶ್ರೀಂ ಶ್ರೀಮಾತ್ರೇ ನಮಃ
2. ಓಂ ಶ್ರೀಮಹಾರಾಜ್ಞ್ಯೈ ನಮಃ
3. ಓಂ ಶ್ರೀಮತ್ಸಿಂಹಾಸನೇಶ್ವರ್ಯೈ ನಮಃ
4. ಓಂ ಚಿದಗ್ನಿಕುಂಡಸಂಭೂತಾಯೈ ನಮಃ
5. ಓಂ ದೇವಕಾರ್ಯಸಮುದ್ಯತಾಯೈ ನಮಃ
6. ಓಂ ಉದ್ಯದ್ಭಾನುಸಹಸ್ರಾಭಾಯೈ ನಮಃ
7. ಓಂ ಚತುರ್ಬಾಹುಸಮನ್ವಿತಾಯೈ ನಮಃ
8. ಓಂ ರಾಗಸ್ವರೂಪಪಾಶಾಢ್ಯಾಯೈ ನಮಃ
9. ಓಂ ಕ್ರೋಧಾಕಾರಾಂಕುಶೋಜ್ಜ್ವಲಾಯೈ ನಮಃ
10. ಓಂ ಮನೋರೂಪೇಕ್ಷುಕೋದಂಡಾಯೈ ನಮಃ 10
11. ಓಂ ಪಂಚತನ್ಮಾತ್ರಸಾಯಕಾಯೈ ನಮಃ
12. ಓಂ ನಿಜಾರುಣಪ್ರಭಾಪೂರಮಜ್ಜದ್ ಬ್ರಹ್ಮಾಂಡಮಂಡಲಾಯೈ ನಮಃ
13. ಓಂ ಚಂಪಕಾಶೋಕಪುನ್ನಾಗಸೌಗಂಧಿಕಲಸತ್ಕಚಾಯೈ ನಮಃ
14. ಓಂ ಕುರುವಿಂದಮಣಿಶ್ರೇಣೀಕನತ್ಕೋಟೀರಮಂಡಿತಾಯೈ ನಮಃ
15. ಓಂ ಅಷ್ಟಮೀಚಂದ್ರವಿಭ್ರಾಜದಲಿಕಸ್ಥಲಶೋಭಿತಾಯೈ ನಮಃ
16. ಓಂ ಮುಖಚಂದ್ರಕಲಂಕಾಭಮೃಗನಾಭಿವಿಶೇಷಕಾಯೈ ನಮಃ
17. ಓಂ ವದನಸ್ಮರಮಾಂಗಲ್ಯಗೃಹತೋರಣಚಿಲ್ಲಿಕಾಯೈ ನಮಃ
18. ಓಂ ವಕ್ತ್ರಲಕ್ಷ್ಮೀಪರೀವಾಹಚಲನ್ಮೀನಾಭಲೋಚನಾಯೈ ನಮಃ
19. ಓಂ ನವಚಂಪಕಪುಷ್ಪಾಭನಾಸಾದಂಡವಿರಾಜಿತಾಯೈ ನಮಃ
20. ಓಂ ತಾರಾಕಾಂತಿತಿರಸ್ಕಾರಿನಾಸಾಭರಣಭಾಸುರಾಯೈ ನಮಃ 20
21. ಓಂ ಕದಂಬಮಂಜರೀಕ್ಲೃಪ್ತಕರ್ಣಪೂರಮನೋಹರಾಯೈ ನಮಃ
22. ಓಂ ತಾಟಂಕಯುಗಲೀಭೂತತಪನೋಡುಪಮಂಡಲಾಯೈ ನಮಃ
23. ಓಂ ಪದ್ಮರಾಗಶಿಲಾದರ್ಶಪರಿಭಾವಿಕಪೋಲಭುವೇ ನಮಃ
24. ಓಂ ನವವಿದ್ರುಮಬಿಂಬಶ್ರೀನ್ಯಕ್ಕಾರಿರದನಚ್ಛದಾಯೈ ನಮಃ
25. ಓಂ ಶುದ್ಧವಿದ್ಯಾಂಕುರಾಕಾರದ್ವಿಜಪಂಕ್ತಿದ್ವಯೋಜ್ಜ್ವಲಾಯೈ ನಮಃ
26. ಓಂ ಕರ್ಪೂರವೀಟಿಕಾಮೋದಸಮಾಕರ್ಷಿ ದಿಗಂತರಾಯೈ ನಮಃ
27. ಓಂ ನಿಜಸಲ್ಲಾಪಮಾಧುರ್ಯ ವಿನಿರ್ಭತ್ಸಿತಕಚ್ಛಪ್ಯೈ ನಮಃ
28. ಓಂ ಮಂದಸ್ಮಿತಪ್ರಭಾಪೂರಮಜ್ಜತ್ಕಾಮೇಶಮಾನಸಾಯೈ ನಮಃ
29. ಓಂ ಅನಾಕಲಿತಸಾದೃಶ್ಯಚಿಬುಕಶ್ರೀವಿರಾಜಿತಾಯೈ ನಮಃ
30. ಓಂ ಕಾಮೇಶಬದ್ಧಮಾಂಗಲ್ಯಸೂತ್ರಶೋಭಿತಕಂಧರಾಯೈ ನಮಃ 30
31. ಓಂ ಕನಕಾಂಗದಕೇಯೂರಕಮನೀಯಭುಜಾನ್ವಿತಾಯೈ ನಮಃ
32. ಓಂ ರತ್ನಗ್ರೈವೇಯ ಚಿಂತಾಕಲೋಲಮುಕ್ತಾಫಲಾನ್ವಿತಾಯೈ ನಮಃ
33. ಓಂ ಕಾಮೇಶ್ವರಪ್ರೇಮರತ್ನಮಣಿಪ್ರತಿಪಣಸ್ತನ್ಯೈ ನಮಃ
34. ಓಂ ನಾಭ್ಯಾಲವಾಲರೋಮಾಲಿಲತಾಫಲಕುಚದ್ವಯ್ಯೈ ನಮಃ
35. ಓಂ ಲಕ್ಷ್ಯರೋಮಲತಾಧಾರತಾಸಮುನ್ನೇಯಮಧ್ಯಮಾಯೈ ನಮಃ
36. ಓಂ ಸ್ತನಭಾರದಲನ್ಮಧ್ಯಪಟ್ಟಬಂಧವಲಿತ್ರಯಾಯೈ ನಮಃ
37. ಓಂ ಅರುಣಾರುಣಕೌಸುಂಭವಸ್ತ್ರಭಾಸ್ವತ್ಕಟೀತಟ್ಯೈ ನಮಃ
38. ಓಂ ರತ್ನಕಿಂಕಿಣಿಕಾರಮ್ಯರಶನಾದಾಮಭೂಷಿತಾಯೈ ನಮಃ
39. ಓಂ ಕಾಮೇಶಜ್ಞಾತಸೌಭಾಗ್ಯಮಾರ್ದವೋರುದ್ವಯಾನ್ವಿತಾಯೈ ನಮಃ
40. ಓಂ ಮಾಣಿಕ್ಯಮುಕುಟಾಕಾರಜಾನುದ್ವಯವಿರಾಜಿತಾಯೈ ನಮಃ 40
41. ಓಂ ಇಂದ್ರಗೋಪಪರಿಕ್ಷಿಪ್ತಸ್ಮರತೂಣಾಭಜಂಘಿಕಾಯೈ ನಮಃ
42. ಓಂ ಗೂಢಗುಲ್ಫಾಯೈ ನಮಃ
43. ಓಂ ಕೂರ್ಮ ಪೃಷ್ಠಜಯಿಷ್ಣುಪ್ರಪದಾನ್ವಿತಾಯೈ ನಮಃ
44. ಓಂ ನಖದೀಧಿತಿಸಂಛನ್ನನಮಜ್ಜನತಮೋಗುಣಾಯೈ ನಮಃ
45. ಓಂ ಪದದ್ವಯಪ್ರಭಾಜಾಲಪರಾಕೃತಸರೋರುಹಾಯೈ ನಮಃ
46. ಓಂ ಶಿಂಜಾನಮಣಿಮಂಜೀರಮಂಡಿತಶ್ರೀಪದಾಂಬುಜಾಯೈ ನಮಃ
47. ಓಂ ಮರಾಲೀಮಂದಗಮನಾಯೈ ನಮಃ
48. ಓಂ ಮಹಾಲಾವಣ್ಯಶೇವಧಯೇ ನಮಃ
49. ಓಂ ಸರ್ವಾರುಣಾಯೈ ನಮಃ
50. ಓಂ ಅನವದ್ಯಾಂಗ್ಯೈ ನಮಃ 50
51. ಓಂ ಸರ್ವಾಭರಣಭೂಷಿತಾಯೈ ನಮಃ
52. ಓಂ ಶಿವಕಾಮೇಶ್ವರಾಂಕಸ್ಥಾಯೈ ನಮಃ
53. ಓಂ ಶಿವಾಯೈ ನಮಃ
54. ಓಂ ಸ್ವಾಧೀನವಲ್ಲಭಾಯೈ ನಮಃ
55. ಓಂ ಸುಮೇರುಮಧ್ಯಶೃಂಗಸ್ಥಾಯೈ ನಮಃ
56. ಓಂ ಶ್ರೀಮನ್ನಗರನಾಯಿಕಾಯೈ ನಮಃ
57. ಓಂ ಚಿಂತಾಮಣಿಗೃಹಾಂತಸ್ಥಾಯೈ ನಮಃ
58. ಓಂ ಪಂಚಬ್ರಹ್ಮಾಸನಸ್ಥಿತಾಯೈ ನಮಃ
59. ಓಂ ಮಹಾಪದ್ಮಾಟವೀಸಂಸ್ಥಾಯೈ ನಮಃ
60. ಓಂ ಕದಂಬವನವಾಸಿನ್ಯೈ ನಮಃ 60
61. ಓಂ ಸುಧಾಸಾಗರಮಧ್ಯಸ್ಥಾಯೈ ನಮಃ
62. ಓಂ ಕಾಮಾಕ್ಷ್ಯೈ ನಮಃ
63. ಓಂ ಕಾಮದಾಯಿನ್ಯೈ ನಮಃ
64. ಓಂ ದೇವರ್ಷಿಗಣಸಂಘಾತಸ್ತೂಯಮಾನಾತ್ಮವೈಭವಾಯೈ ನಮಃ
65. ಓಂ ಭಂಡಾಸುರವಧೋದ್ಯುಕ್ತಶಕ್ತಿಸೇನಾಸಮನ್ವಿತಾಯೈ ನಮಃ
66. ಓಂ ಸಂಪತ್ಕರೀಸಮಾರೂಢಸಿಂಧುರವ್ರಜಸೇವಿತಾಯೈ ನಮಃ
67. ಓಂ ಅಶ್ವಾರೂಢಾಧಿಷ್ಠಿತಾಶ್ವಕೋಟಿಕೋಟಿಭಿರಾವೃತಾಯೈ ನಮಃ
68. ಓಂ ಚಕ್ರರಾಜರಥಾರೂಢಸರ್ವಾಯುಧಪರಿಷ್ಕೃತಾಯೈ ನಮಃ
69. ಓಂ ಗೇಯಚಕ್ರರಥಾರೂಢಮಂತ್ರಿಣೀಪರಿಸೇವಿತಾಯೈ ನಮಃ
70. ಓಂ ಕಿರಿಚಕ್ರರಥಾರೂಢದಂಡನಾಥಾಪುರಸ್ಕೃತಾಯೈ ನಮಃ 70
71. ಓಂ ಜ್ವಾಲಾಮಾಲಿನಿಕಾಕ್ಷಿಪ್ತವಹ್ನಿಪ್ರಾಕಾರಮಧ್ಯಗಾಯೈ ನಮಃ
72. ಓಂ ಭಂಡಸೈನ್ಯವಧೋದ್ಯುಕ್ತಶಕ್ತಿವಿಕ್ರಮಹರ್ಷಿತಾಯೈ ನಮಃ
73. ಓಂ ನಿತ್ಯಾಪರಾಕ್ರಮಾಟೋಪನಿರೀಕ್ಷಣಸಮುತ್ಸುಕಾಯೈ ನಮಃ
74. ಓಂ ಭಂಡಪುತ್ರವಧೋದ್ಯುಕ್ತಬಾಲಾವಿಕ್ರಮನಂದಿತಾಯೈ ನಮಃ
75. ಓಂ ಮಂತ್ರಿಣ್ಯಂಬಾವಿರಚಿತವಿಷಂಗವಧತೋಷಿತಾಯೈ ನಮಃ
76. ಓಂ ವಿಶುಕ್ರಪ್ರಾಣಹರಣವಾರಾಹೀವೀರ್ಯನಂದಿತಾಯೈ ನಮಃ
77. ಓಂ ಕಾಮೇಶ್ವರಮುಖಾಲೋಕಕಲ್ಪಿತಶ್ರೀಗಣೇಶ್ವರಾಯೈ ನಮಃ
78. ಓಂ ಮಹಾಗಣೇಶನಿರ್ಭಿನ್ನವಿಘ್ನಯಂತ್ರಪ್ರಹರ್ಷಿತಾಯೈ ನಮಃ
79. ಓಂ ಭಂಡಾಸುರೇಂದ್ರನಿರ್ಮುಕ್ತಶಸ್ತ್ರಪ್ರತ್ಯಸ್ತ್ರವರ್ಷಿಣ್ಯೈ ನಮಃ
80. ಓಂ ಕರಾಂಗುಲಿನಖೋತ್ಪನ್ನನಾರಾಯಣದಶಾಕೃತ್ಯೈ ನಮಃ 80
81. ಓಂ ಮಹಾಪಾಶುಪತಾಸ್ತ್ರಾಗ್ನಿನಿರ್ದಗ್ಧಾಸುರಸೈನಿಕಾಯೈ ನಮಃ
82. ಓಂ ಕಾಮೇಶ್ವರಾಸ್ತ್ರನಿರ್ದಗ್ಧಸಭಾಂಡಾಸುರಶೂನ್ಯಕಾಯೈ ನಮಃ
83. ಓಂ ಬ್ರಹ್ಮೋಪೇಂದ್ರಮಹೇಂದ್ರಾದಿದೇವಸಂಸ್ತುತವೈಭವಾಯೈ ನಮಃ
84. ಓಂ ಹರನೇತ್ರಾಗ್ನಿಸಂದಗ್ಧಕಾಮಸಂಜೀವನೌಷಧ್ಯೈ ನಮಃ
85. ಓಂ ಶ್ರೀಮದ್ವಾಗ್ಭವಕೂಟೈಕಸ್ವರೂಪಮುಖಪಂಕಜಾಯೈ ನಮಃ
86. ಓಂ ಕಂಠಾಧಃ ಕಟಿಪರ್ಯಂತಮಧ್ಯಕೂಟಸ್ವರೂಪಿಣ್ಯೈ ನಮಃ
87. ಓಂ ಶಕ್ತಿಕೂಟೈಕತಾಪನ್ನಕಟ್ಯಧೋಭಾಗಧಾರಿಣ್ಯೈ ನಮಃ
88. ಓಂ ಮೂಲಮಂತ್ರಾತ್ಮಿಕಾಯೈ ನಮಃ
89. ಓಂ ಮೂಲಕೂಟತ್ರಯಕಲೇಬರಾಯೈ ನಮಃ
90. ಓಂ ಕುಲಾಮೃತೈಕರಸಿಕಾಯೈ ನಮಃ 90
91. ಓಂ ಕುಲಸಂಕೇತಪಾಲಿನ್ಯೈ ನಮಃ
92. ಓಂ ಕುಲಾಂಗನಾಯೈ ನಮಃ
93. ಓಂ ಕುಲಾಂತಸ್ಥಾಯೈ ನಮಃ
94. ಓಂ ಕೌಲಿನ್ಯೈ ನಮಃ
95. ಓಂ ಕುಲಯೋಗಿನ್ಯೈ ನಮಃ
96. ಓಂ ಅಕುಲಾಯೈ ನಮಃ
97. ಓಂ ಸಮಯಾಂತಸ್ಥಾಯೈ ನಮಃ
98. ಓಂ ಸಮಯಾಚಾರತತ್ಪರಾಯೈ ನಮಃ
99. ಓಂ ಮೂಲಾಧಾರೈಕನಿಲಯಾಯೈ ನಮಃ
100. ಓಂ ಬ್ರಹ್ಮಗ್ರಂಥಿವಿಭೇದಿನ್ಯೈ ನಮಃ 100
101. ಓಂ ಮಣಿಪೂರಾಂತರುದಿತಾಯೈ ನಮಃ
102. ಓಂ ವಿಷ್ಣುಗ್ರಂಥಿವಿಭೇದಿನ್ಯೈ ನಮಃ
103. ಓಂ ಆಜ್ಞಾಚಕ್ರಾಂತರಾಲಸ್ಥಾಯೈ ನಮಃ
104. ಓಂ ರುದ್ರಗ್ರಂಥಿವಿಭೇದಿನ್ಯೈ ನಮಃ
105. ಓಂ ಸಹಸ್ರಾರಾಂಬುಜಾರೂಢಾಯೈ ನಮಃ
106. ಓಂ ಸುಧಾಸಾರಾಭಿವರ್ಷಿಣ್ಯೈ ನಮಃ
107. ಓಂ ತಟಿಲ್ಲತಾಸಮರುಚ್ಯೈ ನಮಃ
108. ಓಂ ಷಟ್ಚಕ್ರೋಪರಿಸಂಸ್ಥಿತಾಯೈ ನಮಃ
109. ಓಂ ಮಹಾಸಕ್ತ್ಯೈ ನಮಃ
110. ಓಂ ಕುಂಡಲಿನ್ಯೈ ನಮಃ 110
111. ಓಂ ಬಿಸತಂತುತನೀಯಸ್ಯೈ ನಮಃ
112. ಓಂ ಭವಾನ್ಯೈ ನಮಃ
113. ಓಂ ಭಾವನಾಗಮ್ಯಾಯೈ ನಮಃ
114. ಓಂ ಭವಾರಣ್ಯಕುಠಾರಿಕಾಯೈ ನಮಃ
115. ಓಂ ಭದ್ರಪ್ರಿಯಾಯೈ ನಮಃ
116. ಓಂ ಭದ್ರಮೂರ್ತ್ಯೈ ನಮಃ
117. ಓಂ ಭಕ್ತಸೌಭಾಗ್ಯದಾಯಿನ್ಯೈ ನಮಃ
118. ಓಂ ಭಕ್ತಿಪ್ರಿಯಾಯೈ ನಮಃ
119. ಓಂ ಭಕ್ತಿಗಮ್ಯಾಯೈ ನಮಃ
120. ಓಂ ಭಕ್ತಿವಶ್ಯಾಯೈ ನಮಃ 120
121. ಓಂ ಭಯಾಪಹಾಯೈ ನಮಃ
122. ಓಂ ಶಾಂಭವ್ಯೈ ನಮಃ
123. ಓಂ ಶಾರದಾರಾಧ್ಯಾಯೈ ನಮಃ
124. ಓಂ ಶರ್ವಾಣ್ಯೈ ನಮಃ
125. ಓಂ ಶರ್ಮದಾಯಿನ್ಯೈ ನಮಃ
126. ಓಂ ಶಾಂಕರ್ಯೈ ನಮಃ
127. ಓಂ ಶ್ರೀಕರ್ಯೈ ನಮಃ
128. ಓಂ ಸಾಧ್ವ್ಯೈ ನಮಃ
129. ಓಂ ಶರಚ್ಚಂದ್ರನಿಭಾನನಾಯೈ ನಮಃ
130. ಓಂ ಶಾತೋದರ್ಯೈ ನಮಃ 130
131. ಓಂ ಶಾಂತಿಮತ್ಯೈ ನಮಃ
132. ಓಂ ನಿರಾಧಾರಾಯೈ ನಮಃ
133. ಓಂ ನಿರಂಜನಾಯೈ ನಮಃ
134. ಓಂ ನಿರ್ಲೇಪಾಯೈ ನಮಃ
135. ಓಂ ನಿರ್ಮಲಾಯೈ ನಮಃ
136. ಓಂ ನಿತ್ಯಾಯೈ ನಮಃ
137. ಓಂ ನಿರಾಕಾರಾಯೈ ನಮಃ
138. ಓಂ ನಿರಾಕುಲಾಯೈ ನಮಃ
139. ಓಂ ನಿರ್ಗುಣಾಯೈ ನಮಃ
140. ಓಂ ನಿಷ್ಕಲಾಯೈ ನಮಃ 140
141. ಓಂ ಶಾಂತಾಯೈ ನಮಃ
142. ಓಂ ನಿಷ್ಕಾಮಾಯೈ ನಮಃ
143. ಓಂ ನಿರುಪಪ್ಲವಾಯೈ ನಮಃ
144. ಓಂ ನಿತ್ಯಮುಕ್ತಾಯೈ ನಮಃ
145. ಓಂ ನಿರ್ವಿಕಾರಾಯೈ ನಮಃ
146. ಓಂ ನಿಷ್ಪ್ರಪಂಚಾಯೈ ನಮಃ
147. ಓಂ ನಿರಾಶ್ರಯಾಯೈ ನಮಃ
148. ಓಂ ನಿತ್ಯಶುದ್ಧಾಯೈ ನಮಃ
149. ಓಂ ನಿತ್ಯಬುದ್ಧಾಯೈ ನಮಃ
150. ಓಂ ನಿರವದ್ಯಾಯೈ ನಮಃ 150
151. ಓಂ ನಿರಂತರಾಯೈ ನಮಃ
152. ಓಂ ನಿಷ್ಕಾರಣಾಯೈ ನಮಃ
153. ಓಂ ನಿಷ್ಕಲಂಕಾಯೈ ನಮಃ
154. ಓಂ ನಿರುಪಾಧಯೇ ನಮಃ
155. ಓಂ ನಿರೀಶ್ವರಾಯೈ ನಮಃ
156. ಓಂ ನೀರಾಗಾಯೈ ನಮಃ
157. ಓಂ ರಾಗಮಥನ್ಯೈ ನಮಃ
158. ಓಂ ನಿರ್ಮದಾಯೈ ನಮಃ
159. ಓಂ ಮದನಾಶಿನ್ಯೈ ನಮಃ
160. ಓಂ ನಿಶ್ಚಿಂತಾಯೈ ನಮಃ 160
161. ಓಂ ನಿರಹಂಕಾರಾಯೈ ನಮಃ
162. ಓಂ ನಿರ್ಮೋಹಾಯೈ ನಮಃ
163. ಓಂ ಮೋಹನಾಶಿನ್ಯೈ ನಮಃ
164. ಓಂ ನಿರ್ಮಮಾಯೈ ನಮಃ
165. ಓಂ ಮಮತಾಹಂತ್ರ್ಯೈ ನಮಃ
166. ಓಂ ನಿಷ್ಪಾಪಾಯೈ ನಮಃ
167. ಓಂ ಪಾಪನಾಶಿನ್ಯೈ ನಮಃ
168. ಓಂ ನಿಷ್ಕ್ರೋಧಾಯೈ ನಮಃ
169. ಓಂ ಕ್ರೋಧಶಮನ್ಯೈ ನಮಃ
170. ಓಂ ನಿರ್ಲೋಭಾಯೈ ನಮಃ 170
171. ಓಂ ಲೋಭನಾಶಿನ್ಯೈ ನಮಃ
172. ಓಂ ನಿಃಸಂಶಯಾಯೈ ನಮಃ
173. ಓಂ ಸಂಶಯಘ್ನ್ಯೈ ನಮಃ
174. ಓಂ ನಿರ್ಭವಾಯೈ ನಮಃ
175. ಓಂ ಭವನಾಶಿನ್ಯೈ ನಮಃ
176. ಓಂ ನಿರ್ವಿಕಲ್ಪಾಯೈ ನಮಃ
177. ಓಂ ನಿರಾಬಾಧಾಯೈ ನಮಃ
178. ಓಂ ನಿರ್ಭೇದಾಯೈ ನಮಃ
179. ಓಂ ಭೇದನಾಶಿನ್ಯೈ ನಮಃ
180. ಓಂ ನಿರ್ನಾಶಾಯೈ ನಮಃ 180
181. ಓಂ ಮೃತ್ಯುಮಥನ್ಯೈ ನಮಃ
182. ಓಂ ನಿಷ್ಕ್ರಿಯಾಯೈ ನಮಃ
183. ಓಂ ನಿಷ್ಪರಿಗ್ರಹಾಯೈ ನಮಃ
184. ಓಂ ನಿಸ್ತುಲಾಯೈ ನಮಃ
185. ಓಂ ನೀಲಚಿಕುರಾಯೈ ನಮಃ
186. ಓಂ ನಿರಪಾಯಾಯೈ ನಮಃ
187. ಓಂ ನಿರತ್ಯಯಾಯೈ ನಮಃ
188. ಓಂ ದುರ್ಲಭಾಯೈ ನಮಃ
189. ಓಂ ದುರ್ಗಮಾಯೈ ನಮಃ
190. ಓಂ ದುರ್ಗಾಯೈ ನಮಃ 190
191. ಓಂ ದುಃಖಹಂತ್ರ್ಯೈ ನಮಃ
192. ಓಂ ಸುಖಪ್ರದಾಯೈ ನಮಃ
193. ಓಂ ದುಷ್ಟದೂರಾಯೈ ನಮಃ
194. ಓಂ ದುರಾಚಾರಶಮನ್ಯೈ ನಮಃ
195. ಓಂ ದೋಷವರ್ಜಿತಾಯೈ ನಮಃ
196. ಓಂ ಸರ್ವಜ್ಞಾಯೈ ನಮಃ
197. ಓಂ ಸಾಂದ್ರಕರುಣಾಯೈ ನಮಃ
198. ಓಂ ಸಮಾನಾಧಿಕವರ್ಜಿತಾಯೈ ನಮಃ
199. ಓಂ ಸರ್ವಶಕ್ತಿಮಯ್ಯೈ ನಮಃ
200. ಓಂ ಸರ್ವಮಂಗಲಾಯೈ ನಮಃ 200
201. ಓಂ ಸದ್ಗತಿಪ್ರದಾಯೈ ನಮಃ
202. ಓಂ ಸರ್ವೇಶ್ವರ್ಯೈ ನಮಃ
203. ಓಂ ಸರ್ವಮಯ್ಯೈ ನಮಃ
204. ಓಂ ಸರ್ವಮಂತ್ರಸ್ವರೂಪಿಣ್ಯೈ ನಮಃ
205. ಓಂ ಸರ್ವಯಂತ್ರಾತ್ಮಿಕಾಯೈ ನಮಃ
206. ಓಂ ಸರ್ವತಂತ್ರರೂಪಾಯೈ ನಮಃ
207. ಓಂ ಮನೋನ್ಮನ್ಯೈ ನಮಃ
208. ಓಂ ಮಾಹೇಶ್ವರ್ಯೈ ನಮಃ
209. ಓಂ ಮಹಾದೇವ್ಯೈ ನಮಃ
210. ಓಂ ಮಹಾಲಕ್ಷ್ಮ್ಯೈ ನಮಃ 210
211. ಓಂ ಮೃಡಪ್ರಿಯಾಯೈ ನಮಃ
212. ಓಂ ಮಹಾರೂಪಾಯೈ ನಮಃ
213. ಓಂ ಮಹಾಪೂಜ್ಯಾಯೈ ನಮಃ
214. ಓಂ ಮಹಾಪಾತಕನಾಶಿನ್ಯೈ ನಮಃ
215. ಓಂ ಮಹಾಮಾಯಾಯೈ ನಮಃ
216. ಓಂ ಮಹಾಸತ್ವಾಯೈ ನಮಃ
217. ಓಂ ಮಹಾಶಕ್ತ್ಯೈ ನಮಃ
218. ಓಂ ಮಹಾರತ್ಯೈ ನಮಃ
219. ಓಂ ಮಹಾಭೋಗಾಯೈ ನಮಃ
220. ಓಂ ಮಹೈಶ್ವರ್ಯಾಯೈ ನಮಃ 220
221. ಓಂ ಮಹಾವೀರ್ಯಾಯೈ ನಮಃ
222. ಓಂ ಮಹಾಬಲಾಯೈ ನಮಃ
223. ಓಂ ಮಹಾಬುದ್ಧ್ಯೈ ನಮಃ
224. ಓಂ ಮಹಾಸಿದ್ಧ್ಯೈ ನಮಃ
225. ಓಂ ಮಹಾಯೋಗೇಶ್ವರೇಶ್ವರ್ಯೈ ನಮಃ
226. ಓಂ ಮಹಾತಂತ್ರಾಯೈ ನಮಃ
227. ಓಂ ಮಹಾಮಂತ್ರಾಯೈ ನಮಃ
228. ಓಂ ಮಹಾಯಂತ್ರಾಯೈ ನಮಃ
229. ಓಂ ಮಹಾಸನಾಯೈ ನಮಃ
230. ಓಂ ಮಹಾಯಾಗಕ್ರಮಾರಾಧ್ಯಾಯೈ ನಮಃ 230
231. ಓಂ ಮಹಾಭೈರವಪೂಜಿತಾಯೈ ನಮಃ
232. ಓಂ ಮಹೇಶ್ವರಮಹಾಕಲ್ಪಮಹಾ ತಾಂಡವಸಾಕ್ಷಿಣ್ಯೈ ನಮಃ
233. ಓಂ ಮಹಾಕಾಮೇಶಮಹಿಷ್ಯೈ ನಮಃ
234. ಓಂ ಮಹಾತ್ರಿಪುರಸುಂದರ್ಯೈ ನಮಃ
235. ಓಂ ಚತುಃಷಷ್ಟ್ಯುಪಚಾರಾಢ್ಯಾಯೈ ನಮಃ
236. ಓಂ ಚತುಃಷಷ್ಟಿಕಲಾಮಯ್ಯೈ ನಮಃ
237. ಓಂ ಮಹಾಚತುಃಷಷ್ಟಿಕೋಟಿ ಯೋಗಿನೀಗಣಸೇವಿತಾಯೈ ನಮಃ
238. ಓಂ ಮನುವಿದ್ಯಾಯೈ ನಮಃ
239. ಓಂ ಚಂದ್ರವಿದ್ಯಾಯೈ ನಮಃ
240. ಓಂ ಚಂದ್ರಮಂಡಲಮಧ್ಯಗಾಯೈ ನಮಃ 240
241. ಓಂ ಚಾರುರೂಪಾಯೈ ನಮಃ
242. ಓಂ ಚಾರುಹಾಸಾಯೈ ನಮಃ
243. ಓಂ ಚಾರುಚಂದ್ರಕಲಾಧರಾಯೈ ನಮಃ
244. ಓಂ ಚರಾಚರಜಗನ್ನಾಥಾಯೈ ನಮಃ
245. ಓಂ ಚಕ್ರರಾಜನಿಕೇತನಾಯೈ ನಮಃ
246. ಓಂ ಪಾರ್ವತ್ಯೈ ನಮಃ
247. ಓಂ ಪದ್ಮನಯನಾಯೈ ನಮಃ
248. ಓಂ ಪದ್ಮರಾಗಸಮಪ್ರಭಾಯೈ ನಮಃ
249. ಓಂ ಪಂಚಪ್ರೇತಾಸನಾಸೀನಾಯೈ ನಮಃ
250. ಓಂ ಪಂಚಬ್ರಹ್ಮಸ್ವರೂಪಿಣ್ಯೈ ನಮಃ 250
251. ಓಂ ಚಿನ್ಮಯ್ಯೈ ನಮಃ
252. ಓಂ ಪರಮಾನಂದಾಯೈ ನಮಃ
253. ಓಂ ವಿಜ್ಞಾನಘನರೂಪಿಣ್ಯೈ ನಮಃ
254. ಓಂ ಧ್ಯಾನಧ್ಯಾತೃಧ್ಯೇಯರೂಪಾಯೈ ನಮಃ
255. ಓಂ ಧರ್ಮಾಧರ್ಮವಿವರ್ಜಿತಾಯೈ ನಮಃ
256. ಓಂ ವಿಶ್ವರೂಪಾಯೈ ನಮಃ
257. ಓಂ ಜಾಗರಿಣ್ಯೈ ನಮಃ
258. ಓಂ ಸ್ವಪತ್ನ್ಯೈ ನಮಃ
259. ಓಂ ತೈಜಸಾತ್ಮಿಕಾಯೈ ನಮಃ
260. ಓಂ ಸುಪ್ತಾಯೈ ನಮಃ 260
261. ಓಂ ಪ್ರಾಜ್ಞಾತ್ಮಿಕಾಯೈ ನಮಃ
262. ಓಂ ತುರ್ಯಾಯೈ ನಮಃ
263. ಓಂ ಸರ್ವಾವಸ್ಥಾವಿವರ್ಜಿತಾಯೈ ನಮಃ
264. ಓಂ ಸೃಷ್ಟಿಕರ್ತ್ರ್ಯೈ ನಮಃ
265. ಓಂ ಬ್ರಹ್ಮರೂಪಾಯೈ ನಮಃ
266. ಓಂ ಗೋಪ್ತ್ರ್ಯೈ ನಮಃ
267. ಓಂ ಗೋವಿಂದರೂಪಿಣ್ಯೈ ನಮಃ
268. ಓಂ ಸಂಹಾರಿಣ್ಯೈ ನಮಃ
269. ಓಂ ರುದ್ರರೂಪಾಯೈ ನಮಃ
270. ಓಂ ತಿರೋಧಾನಕರ್ಯೈ ನಮಃ 270
271. ಓಂ ಈಶ್ವರ್ಯೈ ನಮಃ
272. ಓಂ ಸದಾಶಿವಾಯೈ ನಮಃ
273. ಓಂ ಅನುಗ್ರಹದಾಯೈ ನಮಃ
274. ಓಂ ಪಂಚಕೃತ್ಯಪರಾಯಣಾಯೈ ನಮಃ
275. ಓಂ ಭಾನುಮಂಡಲಮಧ್ಯಸ್ಥಾಯೈ ನಮಃ
276. ಓಂ ಭೈರವ್ಯೈ ನಮಃ
277. ಓಂ ಭಗಮಾಲಿನ್ಯೈ ನಮಃ
278. ಓಂ ಪದ್ಮಾಸನಾಯೈ ನಮಃ
279. ಓಂ ಭಗವತ್ಯೈ ನಮಃ
280. ಓಂ ಪದ್ಮನಾಭಸಹೋದರ್ಯೈ ನಮಃ 280
281. ಓಂ ಉನ್ಮೇಷನಿಮಿಷೋತ್ಪನ್ನವಿಪನ್ನಭುವನಾವಲ್ಯೈ ನಮಃ
282. ಓಂ ಸಹಸ್ರಶೀರ್ಷವದನಾಯೈ ನಮಃ
283. ಓಂ ಸಹಸ್ರಾಕ್ಷ್ಯೈ ನಮಃ
284. ಓಂ ಸಹಸ್ರಪದೇ ನಮಃ
285. ಓಂ ಆಬ್ರಹ್ಮಕೀಟಜನನ್ಯೈ ನಮಃ
286. ಓಂ ವರ್ಣಾಶ್ರಮವಿಧಾಯಿನ್ಯೈ ನಮಃ
287. ಓಂ ನಿಜಾಜ್ಞಾರೂಪನಿಗಮಾಯೈ ನಮಃ
288. ಓಂ ಪುಣ್ಯಾಪುಣ್ಯಫಲಪ್ರದಾಯೈ ನಮಃ
289. ಓಂ ಶ್ರುತಿಸೀಮಂತಸಿಂದೂರೀಕೃತ ಪಾದಾಬ್ಜಧೂಲಿಕಾಯೈ ನಮಃ
290. ಓಂ ಸಕಲಾಗಮಸಂದೋಹಶುಕ್ತಿಸಂಪುಟಮೌಕ್ತಿಕಾಯೈ ನಮಃ 290
291. ಓಂ ಪುರುಷಾರ್ಥಪ್ರದಾಯೈ ನಮಃ
292. ಓಂ ಪೂರ್ಣಾಯೈ ನಮಃ
293. ಓಂ ಭೋಗಿನ್ಯೈ ನಮಃ
294. ಓಂ ಭುವನೇಶ್ವರ್ಯೈ ನಮಃ
295. ಓಂ ಅಂಬಿಕಾಯೈ ನಮಃ
296. ಓಂ ಅನಾದಿನಿಧನಾಯೈ ನಮಃ
297. ಓಂ ಹರಿಬ್ರಹ್ಮೇಂದ್ರಸೇವಿತಾಯೈ ನಮಃ
298. ಓಂ ನಾರಾಯಣ್ಯೈ ನಮಃ
299. ಓಂ ನಾದರೂಪಾಯೈ ನಮಃ
300. ಓಂ ನಾಮರೂಪವಿವರ್ಜಿತಾಯೈ ನಮಃ 300
301. ಓಂ ಹ್ರೀಂಕಾರ್ಯೈ ನಮಃ
302. ಓಂ ಹ್ರೀಮತ್ಯೈ ನಮಃ
303. ಓಂ ಹೃದ್ಯಾಯೈ ನಮಃ
304. ಓಂ ಹೇಯೋಪಾದೇಯವರ್ಜಿತಾಯೈ ನಮಃ
305. ಓಂ ರಾಜರಾಜಾರ್ಚಿತಾಯೈ ನಮಃ
306. ಓಂ ರಾಜ್ಞ್ಯೈ ನಮಃ
307. ಓಂ ರಮ್ಯಾಯೈ ನಮಃ
308. ಓಂ ರಾಜೀವಲೋಚನಾಯೈ ನಮಃ
309. ಓಂ ರಂಜನ್ಯೈ ನಮಃ
310. ಓಂ ರಮಣ್ಯೈ ನಮಃ 310
311. ಓಂ ರಸ್ಯಾಯೈ ನಮಃ
312. ಓಂ ರಣತ್ಕಿಂಕಿಣಿಮೇಖಲಾಯೈ ನಮಃ
313. ಓಂ ರಮಾಯೈ ನಮಃ
314. ಓಂ ರಾಕೇಂದುವದನಾಯೈ ನಮಃ
315. ಓಂ ರತಿರೂಪಾಯೈ ನಮಃ
316. ಓಂ ರತಿಪ್ರಿಯಾಯೈ ನಮಃ
317. ಓಂ ರಕ್ಷಾಕರ್ಯೈ ನಮಃ
318. ಓಂ ರಾಕ್ಷಸಘ್ನ್ಯೈ ನಮಃ
319. ಓಂ ರಾಮಾಯೈ ನಮಃ
320. ಓಂ ರಮಣಲಂಪಟಾಯೈ ನಮಃ 320
321. ಓಂ ಕಾಮ್ಯಾಯೈ ನಮಃ
322. ಓಂ ಕಾಮಕಲಾರೂಪಾಯೈ ನಮಃ
323. ಓಂ ಕದಂಬಕುಸುಮಪ್ರಿಯಾಯೈ ನಮಃ
324. ಓಂ ಕಲ್ಯಾಣ್ಯೈ ನಮಃ
325. ಓಂ ಜಗತೀಕಂದಾಯೈ ನಮಃ
326. ಓಂ ಕರುಣಾರಸಸಾಗರಾಯೈ ನಮಃ
327. ಓಂ ಕಲಾವತ್ಯೈ ನಮಃ
328. ಓಂ ಕಲಾಲಾಪಾಯೈ ನಮಃ
329. ಓಂ ಕಾಂತಾಯೈ ನಮಃ
330. ಓಂ ಕಾದಂಬರೀಪ್ರಿಯಾಯೈ ನಮಃ 330
331. ಓಂ ವರದಾಯೈ ನಮಃ
332. ಓಂ ವಾಮನಯನಾಯೈ ನಮಃ
333. ಓಂ ವಾರುಣೀಮದವಿಹ್ವಲಾಯೈ ನಮಃ
334. ಓಂ ವಿಶ್ವಾಧಿಕಾಯೈ ನಮಃ
335. ಓಂ ವೇದವೇದ್ಯಾಯೈ ನಮಃ
336. ಓಂ ವಿಂಧ್ಯಾಚಲನಿವಾಸಿನ್ಯೈ ನಮಃ
337. ಓಂ ವಿಧಾತ್ರ್ಯೈ ನಮಃ
338. ಓಂ ವೇದಜನನ್ಯೈ ನಮಃ
339. ಓಂ ವಿಷ್ಣುಮಾಯಾಯೈ ನಮಃ
340. ಓಂ ವಿಲಾಸಿನ್ಯೈ ನಮಃ 340
341. ಓಂ ಕ್ಷೇತ್ರಸ್ವರೂಪಾಯೈ ನಮಃ
342. ಓಂ ಕ್ಷೇತ್ರೇಶ್ಯೈ ನಮಃ
343. ಓಂ ಕ್ಷೇತ್ರಕ್ಷೇತ್ರಜ್ಞಪಾಲಿನ್ಯೈ ನಮಃ
344. ಓಂ ಕ್ಷಯವೃದ್ಧಿವಿನಿರ್ಮುಕ್ತಾಯೈ ನಮಃ
345. ಓಂ ಕ್ಷೇತ್ರಪಾಲಸಮರ್ಚಿತಾಯೈ ನಮಃ
346. ಓಂ ವಿಜಯಾಯೈ ನಮಃ
347. ಓಂ ವಿಮಲಾಯೈ ನಮಃ
348. ಓಂ ವಂದ್ಯಾಯೈ ನಮಃ
349. ಓಂ ವಂದಾರುಜನವತ್ಸಲಾಯೈ ನಮಃ
350. ಓಂ ವಾಗ್ವಾದಿನ್ಯೈ ನಮಃ 350
351. ಓಂ ವಾಮಕೇಶ್ಯೈ ನಮಃ
352. ಓಂ ವಹ್ನಿಮಂಡಲವಾಸಿನ್ಯೈ ನಮಃ
353. ಓಂ ಭಕ್ತಿಮತ್ಕಲ್ಪಲತಿಕಾಯೈ ನಮಃ
354. ಓಂ ಪಶುಪಾಶವಿಮೋಚಿನ್ಯೈ ನಮಃ
355. ಓಂ ಸಂಹೃತಾಶೇಷಪಾಷಂಡಾಯೈ ನಮಃ
356. ಓಂ ಸದಾಚಾರಪ್ರವರ್ತಿಕಾಯೈ ನಮಃ
357. ಓಂ ತಾಪತ್ರಯಾಗ್ನಿಸಂತಪ್ತಸಮಾಹ್ಲಾದನಚಂದ್ರಿಕಾಯೈ ನಮಃ
358. ಓಂ ತರುಣ್ಯೈ ನಮಃ
359. ಓಂ ತಾಪಸಾರಾಧ್ಯಾಯೈ ನಮಃ
360. ಓಂ ತನುಮಧ್ಯಾಯೈ ನಮಃ 360
361. ಓಂ ತಮೋಪಹಾಯೈ ನಮಃ
362. ಓಂ ಚಿತ್ಯೈ ನಮಃ
363. ಓಂ ತತ್ಪದಲಕ್ಷ್ಯಾರ್ಥಾಯೈ ನಮಃ
364. ಓಂ ಚಿದೇಕರಸರೂಪಿಣ್ಯೈ ನಮಃ
365. ಓಂ ಸ್ವಾತ್ಮಾನಂದಲವೀಭೂತಬ್ರಹ್ಮಾದ್ಯಾನಂದಸಂತತ್ಯೈ ನಮಃ
366. ಓಂ ಪರಾಯೈ ನಮಃ
367. ಓಂ ಪ್ರತ್ಯಕ್ ಚಿತೀರೂಪಾಯೈ ನಮಃ
368. ಓಂ ಪಶ್ಯಂತ್ಯೈ ನಮಃ
369. ಓಂ ಪರದೇವತಾಯೈ ನಮಃ
370. ಓಂ ಮಧ್ಯಮಾಯೈ ನಮಃ 370
371. ಓಂ ವೈಖರೀರೂಪಾಯೈ ನಮಃ
372. ಓಂ ಭಕ್ತಮಾನಸಹಂಸಿಕಾಯೈ ನಮಃ
373. ಓಂ ಕಾಮೇಶ್ವರಪ್ರಾಣನಾಡ್ಯೈ ನಮಃ
374. ಓಂ ಕೃತಜ್ಞಾಯೈ ನಮಃ
375. ಓಂ ಕಾಮಪೂಜಿತಾಯೈ ನಮಃ
376. ಓಂ ಶೃಂಗಾರರಸಸಂಪೂರ್ಣಾಯೈ ನಮಃ
377. ಓಂ ಜಯಾಯೈ ನಮಃ
378. ಓಂ ಜಾಲಂಧರಸ್ಥಿತಾಯೈ ನಮಃ
379. ಓಂ ಓಡ್ಯಾಣಪೀಠನಿಲಯಾಯೈ ನಮಃ
380. ಓಂ ಬಿಂದುಮಂಡಲವಾಸಿನ್ಯೈ ನಮಃ 380
381. ಓಂ ರಹೋಯಾಗಕ್ರಮಾರಾಧ್ಯಾಯೈ ನಮಃ
382. ಓಂ ರಹಸ್ತರ್ಪಣತರ್ಪಿತಾಯೈ ನಮಃ
383. ಓಂ ಸದ್ಯಃ ಪ್ರಸಾದಿನ್ಯೈ ನಮಃ
384. ಓಂ ವಿಶ್ವಸಾಕ್ಷಿಣ್ಯೈ ನಮಃ
385. ಓಂ ಸಾಕ್ಷಿವರ್ಜಿತಾಯೈ ನಮಃ
386. ಓಂ ಷಡಂಗದೇವತಾಯುಕ್ತಾಯೈ ನಮಃ
387. ಓಂ ಷಾಡ್ಗುಣ್ಯಪರಿಪೂರಿತಾಯೈ ನಮಃ
388. ಓಂ ನಿತ್ಯಕ್ಲಿನ್ನಾಯೈ ನಮಃ
389. ಓಂ ನಿರುಪಮಾಯೈ ನಮಃ
390. ಓಂ ನಿರ್ವಾಣಸುಖದಾಯಿನ್ಯೈ ನಮಃ 390
391. ಓಂ ನಿತ್ಯಾಷೋಡಶಿಕಾರೂಪಾಯೈ ನಮಃ
392. ಓಂ ಶ್ರೀಕಂಠಾರ್ಧಶರೀರಿಣ್ಯೈ ನಮಃ
393. ಓಂ ಪ್ರಭಾವತ್ಯೈ ನಮಃ
394. ಓಂ ಪ್ರಭಾರೂಪಾಯೈ ನಮಃ
395. ಓಂ ಪ್ರಸಿದ್ಧಾಯೈ ನಮಃ
396. ಓಂ ಪರಮೇಶ್ವರ್ಯೈ ನಮಃ
397. ಓಂ ಮೂಲಪ್ರಕೃತ್ಯೈ ನಮಃ
398. ಓಂ ಅವ್ಯಕ್ತಾಯೈ ನಮಃ
399. ಓಂ ವ್ಯಕ್ತಾವ್ಯಕ್ತಸ್ವರೂಪಿಣ್ಯೈ ನಮಃ
400. ಓಂ ವ್ಯಾಪಿನ್ಯೈ ನಮಃ 400
401. ಓಂ ವಿವಿಧಾಕಾರಾಯೈ ನಮಃ
402. ಓಂ ವಿದ್ಯಾವಿದ್ಯಾಸ್ವರೂಪಿಣ್ಯೈ ನಮಃ
403. ಓಂ ಮಹಾಕಾಮೇಶನಯನಕುಮುದಾಹ್ಲಾದಕೌಮುದ್ಯೈ ನಮಃ
404. ಓಂ ಭಕ್ತಹಾರ್ದತಮೋಭೇದಭಾನುಮದ್ಭಾನುಸಂತತ್ಯೈ ನಮಃ
405. ಓಂ ಶಿವದೂತ್ಯೈ ನಮಃ
406. ಓಂ ಶಿವಾರಾಧ್ಯಾಯೈ ನಮಃ
407. ಓಂ ಶಿವಮೂರ್ತ್ಯೈ ನಮಃ
408. ಓಂ ಶಿವಂಕರ್ಯೈ ನಮಃ
409. ಓಂ ಶಿವಪ್ರಿಯಾಯೈ ನಮಃ
410. ಓಂ ಶಿವಪರಾಯೈ ನಮಃ 410
411. ಓಂ ಶಿಷ್ಟೇಷ್ಟಾಯೈ ನಮಃ
412. ಓಂ ಶಿಷ್ಟಪೂಜಿತಾಯೈ ನಮಃ
413. ಓಂ ಅಪ್ರಮೇಯಾಯೈ ನಮಃ
414. ಓಂ ಸ್ವಪ್ರಕಾಶಾಯೈ ನಮಃ
415. ಓಂ ಮನೋವಾಚಾಮಗೋಚರಾಯೈ ನಮಃ
416. ಓಂ ಚಿಚ್ಛಕ್ತ್ಯೈ ನಮಃ
417. ಓಂ ಚೇತನಾರೂಪಾಯೈ ನಮಃ
418. ಓಂ ಜಡಶಕ್ತ್ಯೈ ನಮಃ
419. ಓಂ ಜಡಾತ್ಮಿಕಾಯೈ ನಮಃ
420. ಓಂ ಗಾಯತ್ರ್ಯೈ ನಮಃ 420
421. ಓಂ ವ್ಯಾಹೃತ್ಯೈ ನಮಃ
422. ಓಂ ಸಂಧ್ಯಾಯೈ ನಮಃ
423. ಓಂ ದ್ವಿಜವೃಂದನಿಷೇವಿತಾಯೈ ನಮಃ
424. ಓಂ ತತ್ತ್ವಾಸನಾಯೈ ನಮಃ
425. ಓಂ ತಸ್ಮೈ ನಮಃ
426. ಓಂ ತುಭ್ಯಂ ನಮಃ
427. ಓಂ ಅಯ್ಯೈ ನಮಃ
428. ಓಂ ಪಂಚಕೋಶಾಂತರಸ್ಥಿತಾಯೈ ನಮಃ
429. ಓಂ ನಿಃಸೀಮಮಹಿಮ್ನೇ ನಮಃ
430. ಓಂ ನಿತ್ಯಯೌವನಾಯೈ ನಮಃ 430
431. ಓಂ ಮದಶಾಲಿನ್ಯೈ ನಮಃ
432. ಓಂ ಮದಘೂರ್ಣಿತರಕ್ತಾಕ್ಷ್ಯೈ ನಮಃ
433. ಓಂ ಮದಪಾಟಲಗಂಡಭುವೇ ನಮಃ
434. ಓಂ ಚಂದನದ್ರವದಿಗ್ಧಾಂಗ್ಯೈ ನಮಃ
435. ಓಂ ಚಾಂಪೇಯಕುಸುಮಪ್ರಿಯಾಯೈ ನಮಃ
436. ಓಂ ಕುಶಲಾಯೈ ನಮಃ
437. ಓಂ ಕೋಮಲಾಕಾರಾಯೈ ನಮಃ
438. ಓಂ ಕುರುಕುಲ್ಲಾಯೈ ನಮಃ
439. ಓಂ ಕುಲೇಶ್ವರ್ಯೈ ನಮಃ
440. ಓಂ ಕುಲಕುಂಡಾಲಯಾಯೈ ನಮಃ 440
441. ಓಂ ಕೌಲಮಾರ್ಗತತ್ಪರಸೇವಿತಾಯೈ ನಮಃ
442. ಓಂ ಕುಮಾರಗಣನಾಥಾಂಬಾಯೈ ನಮಃ
443. ಓಂ ತುಷ್ಟ್ಯೈ ನಮಃ
444. ಓಂ ಪುಷ್ಟ್ಯೈ ನಮಃ
445. ಓಂ ಮತ್ಯೈ ನಮಃ
446. ಓಂ ಧೃತ್ಯೈ ನಮಃ
447. ಓಂ ಶಾಂತ್ಯೈ ನಮಃ
448. ಓಂ ಸ್ವಸ್ತಿಮತ್ಯೈ ನಮಃ
449. ಓಂ ಕಾಂತ್ಯೈ ನಮಃ
450. ಓಂ ನಂದಿನ್ಯೈ ನಮಃ 450
451. ಓಂ ವಿಘ್ನನಾಶಿನ್ಯೈ ನಮಃ
452. ಓಂ ತೇಜೋವತ್ಯೈ ನಮಃ
453. ಓಂ ತ್ರಿನಯನಾಯೈ ನಮಃ
454. ಓಂ ಲೋಲಾಕ್ಷೀಕಾಮರೂಪಿಣ್ಯೈ ನಮಃ
455. ಓಂ ಮಾಲಿನ್ಯೈ ನಮಃ
456. ಓಂ ಹಂಸಿನ್ಯೈ ನಮಃ
457. ಓಂ ಮಾತ್ರೇ ನಮಃ
458. ಓಂ ಮಲಯಾಚಲವಾಸಿನ್ಯೈ ನಮಃ
459. ಓಂ ಸುಮುಖ್ಯೈ ನಮಃ
460. ಓಂ ನಲಿನ್ಯೈ ನಮಃ 460
461. ಓಂ ಸುಭ್ರುವೇ ನಮಃ
462. ಓಂ ಶೋಭನಾಯೈ ನಮಃ
463. ಓಂ ಸುರನಾಯಿಕಾಯೈ ನಮಃ
464. ಓಂ ಕಾಲಕಂಠ್ಯೈ ನಮಃ
465. ಓಂ ಕಾಂತಿಮತ್ಯೈ ನಮಃ
466. ಓಂ ಕ್ಷೋಭಿಣ್ಯೈ ನಮಃ
467. ಓಂ ಸೂಕ್ಷ್ಮರೂಪಿಣ್ಯೈ ನಮಃ
468. ಓಂ ವಜ್ರೇಶ್ವರ್ಯೈ ನಮಃ
469. ಓಂ ವಾಮದೇವ್ಯೈ ನಮಃ
470. ಓಂ ವಯೋಽವಸ್ಥಾವಿವರ್ಜಿತಾಯೈ ನಮಃ 470
471. ಓಂ ಸಿದ್ಧೇಶ್ವರ್ಯೈ ನಮಃ
472. ಓಂ ಸಿದ್ಧವಿದ್ಯಾಯೈ ನಮಃ
473. ಓಂ ಸಿದ್ಧಮಾತ್ರೇ ನಮಃ
474. ಓಂ ಯಶಸ್ವಿನ್ಯೈ ನಮಃ
475. ಓಂ ವಿಶುದ್ಧಿಚಕ್ರನಿಲಯಾಯೈ ನಮಃ
476. ಓಂ ಆರಕ್ತವರ್ಣಾಯೈ ನಮಃ
477. ಓಂ ತ್ರಿಲೋಚನಾಯೈ ನಮಃ
478. ಓಂ ಖಟ್ವಾಂಗಾದಿಪ್ರಹರಣಾಯೈ ನಮಃ
479. ಓಂ ವದನೈಕಸಮನ್ವಿತಾಯೈ ನಮಃ
480. ಓಂ ಪಾಯಸಾನ್ನಪ್ರಿಯಾಯೈ ನಮಃ 480
481. ಓಂ ತ್ವಕ್ಸ್ಥಾಯೈ ನಮಃ
482. ಓಂ ಪಶುಲೋಕಭಯಂಕರ್ಯೈ ನಮಃ
483. ಓಂ ಅಮೃತಾದಿಮಹಾಶಕ್ತಿಸಂವೃತಾಯೈ ನಮಃ
484. ಓಂ ಡಾಕಿನೀಶ್ವರ್ಯೈ ನಮಃ
485. ಓಂ ಅನಾಹತಾಬ್ಜನಿಲಯಾಯೈ ನಮಃ
486. ಓಂ ಶ್ಯಾಮಾಭಾಯೈ ನಮಃ
487. ಓಂ ವದನದ್ವಯಾಯೈ ನಮಃ
488. ಓಂ ದಂಷ್ಟ್ರೋಜ್ಜ್ವಲಾಯೈ ನಮಃ
489. ಓಂ ಅಕ್ಷಮಾಲಾದಿಧರಾಯೈ ನಮಃ
490. ಓಂ ರುಧಿರಸಂಸ್ಥಿತಾಯೈ ನಮಃ 490
491. ಓಂ ಕಾಲರಾತ್ರ್ಯಾದಿಶಕ್ತ್ಯೌಘವೃತಾಯೈ ನಮಃ
492. ಓಂ ಸ್ನಿಗ್ಧೌದನಪ್ರಿಯಾಯೈ ನಮಃ
493. ಓಂ ಮಹಾವೀರೇಂದ್ರವರದಾಯೈ ನಮಃ
494. ಓಂ ರಾಕಿಣ್ಯಂಬಾಸ್ವರೂಪಿಣ್ಯೈ ನಮಃ
495. ಓಂ ಮಣಿಪೂರಾಬ್ಜನಿಲಯಾಯೈ ನಮಃ
496. ಓಂ ವದನತ್ರಯಸಂಯುತಾಯೈ ನಮಃ
497. ಓಂ ವಜ್ರಾಧಿಕಾಯುಧೋಪೇತಾಯೈ ನಮಃ
498. ಓಂ ಡಾಮರ್ಯಾದಿಭಿರಾವೃತಾಯೈ ನಮಃ
499. ಓಂ ರಕ್ತವರ್ಣಾಯೈ ನಮಃ
500. ಓಂ ಮಾಂಸನಿಷ್ಠಾಯೈ ನಮಃ 500
501. ಓಂ ಗುಡಾನ್ನಪ್ರೀತಮಾನಸಾಯೈ ನಮಃ
502. ಓಂ ಸಮಸ್ತಭಕ್ತಸುಖದಾಯೈ ನಮಃ
503. ಓಂ ಲಾಕಿನ್ಯಂಬಾಸ್ವರೂಪಿಣ್ಯೈ ನಮಃ
504. ಓಂ ಸ್ವಾಧಿಷ್ಠಾನಾಂಬುಜಗತಾಯೈ ನಮಃ
505. ಓಂ ಚತುರ್ವಕ್ತ್ರಮನೋಹರಾಯೈ ನಮಃ
506. ಓಂ ಶೂಲಾದ್ಯಾಯುಧಸಂಪನ್ನಾಯೈ ನಮಃ
507. ಓಂ ಪೀತವರ್ಣಾಯೈ ನಮಃ
508. ಓಂ ಅತಿಗರ್ವಿತಾಯೈ ನಮಃ
509. ಓಂ ಮೇದೋನಿಷ್ಠಾಯೈ ನಮಃ
510. ಓಂ ಮಧುಪ್ರೀತಾಯೈ ನಮಃ 510
511. ಓಂ ಬಂದಿನ್ಯಾದಿಸಮನ್ವಿತಾಯೈ ನಮಃ
512. ಓಂ ದಧ್ಯನ್ನಾಸಕ್ತಹೃದಯಾಯೈ ನಮಃ
513. ಓಂ ಕಾಕಿನೀರೂಪಧಾರಿಣ್ಯೈ ನಮಃ
514. ಓಂ ಮೂಲಾಧಾರಾಂಬುಜಾರೂಢಾಯೈ ನಮಃ
515. ಓಂ ಪಂಚವಕ್ತ್ರಾಯೈ ನಮಃ
516. ಓಂ ಅಸ್ಥಿಸಂಸ್ಥಿತಾಯೈ ನಮಃ
517. ಓಂ ಅಂಕುಶಾದಿಪ್ರಹರಣಾಯೈ ನಮಃ
518. ಓಂ ವರದಾದಿ ನಿಷೇವಿತಾಯೈ ನಮಃ
519. ಓಂ ಮುದ್ಗೌದನಾಸಕ್ತಚಿತ್ತಾಯೈ ನಮಃ
520. ಓಂ ಸಾಕಿನ್ಯಂಬಾಸ್ವರೂಪಿಣ್ಯೈ ನಮಃ 520
521. ಓಂ ಆಜ್ಞಾಚಕ್ರಾಬ್ಜನಿಲಯಾಯೈ ನಮಃ
522. ಓಂ ಶುಕ್ಲವರ್ಣಾಯೈ ನಮಃ
523. ಓಂ ಷಡಾನನಾಯೈ ನಮಃ
524. ಓಂ ಮಜ್ಜಾಸಂಸ್ಥಾಯೈ ನಮಃ
525. ಓಂ ಹಂಸವತೀಮುಖ್ಯಶಕ್ತಿಸಮನ್ವಿತಾಯೈ ನಮಃ
526. ಓಂ ಹರಿದ್ರಾನ್ನೈಕರಸಿಕಾಯೈ ನಮಃ
527. ಓಂ ಹಾಕಿನೀರೂಪಧಾರಿಣ್ಯೈ ನಮಃ
528. ಓಂ ಸಹಸ್ರದಲಪದ್ಮಸ್ಥಾಯೈ ನಮಃ
529. ಓಂ ಸರ್ವವರ್ಣೋಪಶೋಭಿತಾಯೈ ನಮಃ
530. ಓಂ ಸರ್ವಾಯುಧಧರಾಯೈ ನಮಃ 530
531. ಓಂ ಶುಕ್ಲಸಂಸ್ಥಿತಾಯೈ ನಮಃ
532. ಓಂ ಸರ್ವತೋಮುಖ್ಯೈ ನಮಃ
533. ಓಂ ಸರ್ವೌದನಪ್ರೀತಚಿತ್ತಾಯೈ ನಮಃ
534. ಓಂ ಯಾಕಿನ್ಯಂಬಾಸ್ವರೂಪಿಣ್ಯೈ ನಮಃ
535. ಓಂ ಸ್ವಾಹಾಯೈ ನಮಃ
536. ಓಂ ಸ್ವಧಾಯೈ ನಮಃ
537. ಓಂ ಅಮತ್ಯೈ ನಮಃ
538. ಓಂ ಮೇಧಾಯೈ ನಮಃ
539. ಓಂ ಶ್ರುತ್ಯೈ ನಮಃ
540. ಓಂ ಸ್ಮೃತ್ಯೈ ನಮಃ 540
541. ಓಂ ಅನುತ್ತಮಾಯೈ ನಮಃ
542. ಓಂ ಪುಣ್ಯಕೀರ್ತ್ಯೈ ನಮಃ
543. ಓಂ ಪುಣ್ಯಲಭ್ಯಾಯೈ ನಮಃ
544. ಓಂ ಪುಣ್ಯಶ್ರವಣಕೀರ್ತನಾಯೈ ನಮಃ
545. ಓಂ ಪುಲೋಮಜಾರ್ಚಿತಾಯೈ ನಮಃ
546. ಓಂ ಬಂಧಮೋಚನ್ಯೈ ನಮಃ
547. ಓಂ ಬರ್ಬರಾಲಕಾಯೈ ನಮಃ
548. ಓಂ ವಿಮರ್ಶರೂಪಿಣ್ಯೈ ನಮಃ
549. ಓಂ ವಿದ್ಯಾಯೈ ನಮಃ
550. ಓಂ ವಿಯದಾದಿಜಗತ್ಪ್ರಸುವೇ ನಮಃ 550
551. ಓಂ ಸರ್ವ ವ್ಯಾಧಿಪ್ರಶಮನ್ಯೈ ನಮಃ
552. ಓಂ ಸರ್ವ ಮೃತ್ಯುನಿವಾರಿಣ್ಯೈ ನಮಃ
553. ಓಂ ಅಗ್ರಗಣ್ಯಾಯೈ ನಮಃ
554. ಓಂ ಅಚಿಂತ್ಯರೂಪಾಯೈ ನಮಃ
555. ಓಂ ಕಲಿಕಲ್ಮಷನಾಶಿನ್ಯೈ ನಮಃ
556. ಓಂ ಕಾತ್ಯಾಯನ್ಯೈ ನಮಃ
557. ಓಂ ಕಾಲಹಂತ್ರ್ಯೈ ನಮಃ
558. ಓಂ ಕಮಲಾಕ್ಷನಿಷೇವಿತಾಯೈ ನಮಃ
559. ಓಂ ತಾಂಬೂಲಪೂರಿತಮುಖ್ಯೈ ನಮಃ
560. ಓಂ ದಾಡಿಮೀಕುಸುಮಪ್ರಭಾಯೈ ನಮಃ 560
561. ಓಂ ಮೃಗಾಕ್ಷ್ಯೈ ನಮಃ
562. ಓಂ ಮೋಹಿನ್ಯೈ ನಮಃ
563. ಓಂ ಮುಖ್ಯಾಯೈ ನಮಃ
564. ಓಂ ಮೃಡಾನ್ಯೈ ನಮಃ
565. ಓಂ ಮಿತ್ರರೂಪಿಣ್ಯೈ ನಮಃ
566. ಓಂ ನಿತ್ಯತೃಪ್ತಾಯೈ ನಮಃ
567. ಓಂ ಭಕ್ತನಿಧಯೇ ನಮಃ
568. ಓಂ ನಿಯಂತ್ರ್ಯೈ ನಮಃ
569. ಓಂ ನಿಖಿಲೇಶ್ವರ್ಯೈ ನಮಃ
570. ಓಂ ಮೈತ್ರ್ಯಾದಿವಾಸನಾಲಭ್ಯಾಯೈ ನಮಃ 570
571. ಓಂ ಮಹಾಪ್ರಲಯಸಾಕ್ಷಿಣ್ಯೈ ನಮಃ
572. ಓಂ ಪರಾಶಕ್ತ್ಯೈ ನಮಃ
573. ಓಂ ಪರಾನಿಷ್ಠಾಯೈ ನಮಃ
574. ಓಂ ಪ್ರಜ್ಞಾನಘನರೂಪಿಣ್ಯೈ ನಮಃ
575. ಓಂ ಮಾಧ್ವೀಪಾನಾಲಸಾಯೈ ನಮಃ
576. ಓಂ ಮತ್ತಾಯೈ ನಮಃ
577. ಓಂ ಮಾತೃಕಾವರ್ಣ ರೂಪಿಣ್ಯೈ ನಮಃ
578. ಓಂ ಮಹಾಕೈಲಾಸನಿಲಯಾಯೈ ನಮಃ
579. ಓಂ ಮೃಣಾಲಮೃದುದೋರ್ಲತಾಯೈ ನಮಃ
580. ಓಂ ಮಹನೀಯಾಯೈ ನಮಃ 580
581. ಓಂ ದಯಾಮೂರ್ತ್ಯೈ ನಮಃ
582. ಓಂ ಮಹಾಸಾಮ್ರಾಜ್ಯಶಾಲಿನ್ಯೈ ನಮಃ
583. ಓಂ ಆತ್ಮವಿದ್ಯಾಯೈ ನಮಃ
584. ಓಂ ಮಹಾವಿದ್ಯಾಯೈ ನಮಃ
585. ಓಂ ಶ್ರೀವಿದ್ಯಾಯೈ ನಮಃ
586. ಓಂ ಕಾಮಸೇವಿತಾಯೈ ನಮಃ
587. ಓಂ ಶ್ರೀಷೋಡಶಾಕ್ಷರೀವಿದ್ಯಾಯೈ ನಮಃ
588. ಓಂ ತ್ರಿಕೂಟಾಯೈ ನಮಃ
589. ಓಂ ಕಾಮಕೋಟಿಕಾಯೈ ನಮಃ
590. ಓಂ ಕಟಾಕ್ಷಕಿಂಕರೀಭೂತಕಮಲಾಕೋಟಿಸೇವಿತಾಯೈ ನಮಃ 590
591. ಓಂ ಶಿರಃಸ್ಥಿತಾಯೈ ನಮಃ
592. ಓಂ ಚಂದ್ರನಿಭಾಯೈ ನಮಃ
593. ಓಂ ಭಾಲಸ್ಥಾಯೈ ನಮಃ
594. ಓಂ ಇಂದ್ರಧನುಃಪ್ರಭಾಯೈ ನಮಃ
595. ಓಂ ಹೃದಯಸ್ಥಾಯೈ ನಮಃ
596. ಓಂ ರವಿಪ್ರಖ್ಯಾಯೈ ನಮಃ
597. ಓಂ ತ್ರಿಕೋಣಾಂತರದೀಪಿಕಾಯೈ ನಮಃ
598. ಓಂ ದಾಕ್ಷಾಯಣ್ಯೈ ನಮಃ
599. ಓಂ ದೈತ್ಯಹಂತ್ರ್ಯೈ ನಮಃ
600. ಓಂ ದಕ್ಷಯಜ್ಞವಿನಾಶಿನ್ಯೈ ನಮಃ 600
601. ಓಂ ದರಾಂದೋಲಿತದೀರ್ಘಾಕ್ಷ್ಯೈ ನಮಃ
602. ಓಂ ದರಹಾಸೋಜ್ಜ್ವಲನ್ಮುಖ್ಯೈ ನಮಃ
603. ಓಂ ಗುರುಮೂರ್ತಯೇ ನಮಃ
604. ಓಂ ಗುಣನಿಧಯೇ ನಮಃ
605. ಓಂ ಗೋಮಾತ್ರೇ ನಮಃ
606. ಓಂ ಗುಹಜನ್ಮಭುವೇ ನಮಃ
607. ಓಂ ದೇವೇಶ್ಯೈ ನಮಃ
608. ಓಂ ದಂಡನೀತಿಸ್ಥಾಯೈ ನಮಃ
609. ಓಂ ದಹರಾಕಾಶರೂಪಿಣ್ಯೈ ನಮಃ
610. ಓಂ ಪ್ರತಿಪನ್ಮುಖ್ಯರಾಕಾಂತತಿಥಿಮಂಡಲಪೂಜಿತಾಯೈ ನಮಃ 610
611. ಓಂ ಕಲಾತ್ಮಿಕಾಯೈ ನಮಃ
612. ಓಂ ಕಲಾನಾಥಾಯೈ ನಮಃ
613. ಓಂ ಕಾವ್ಯಾಲಾಪವಿನೋದಿನ್ಯೈ ನಮಃ
614. ಓಂ ಸಚಾಮರರಮಾವಾಣೀಸವ್ಯದಕ್ಷಿಣಸೇವಿತಾಯೈ ನಮಃ
615. ಓಂ ಆದಿಶಕ್ತ್ಯೈ ನಮಃ
616. ಓಂ ಅಮೇಯಾಯೈ ನಮಃ
617. ಓಂ ಆತ್ಮನೇ ನಮಃ
618. ಓಂ ಪರಮಾಯೈ ನಮಃ
619. ಓಂ ಪಾವನಾಕೃತಯೇ ನಮಃ
620. ಓಂ ಅನೇಕಕೋಟಿಬ್ರಹ್ಮಾಂಡಜನನ್ಯೈ ನಮಃ 620
621. ಓಂ ದಿವ್ಯವಿಗ್ರಹಾಯೈ ನಮಃ
622. ಓಂ ಕ್ಲೀಂಕಾರ್ಯೈ ನಮಃ
623. ಓಂ ಕೇವಲಾಯೈ ನಮಃ
624. ಓಂ ಗುಹ್ಯಾಯೈ ನಮಃ
625. ಓಂ ಕೈವಲ್ಯಪದದಾಯಿನ್ಯೈ ನಮಃ
626. ಓಂ ತ್ರಿಪುರಾಯೈ ನಮಃ
627. ಓಂ ತ್ರಿಜಗದ್ವಂದ್ಯಾಯೈ ನಮಃ
628. ಓಂ ತ್ರಿಮೂರ್ತ್ಯೈ ನಮಃ
629. ಓಂ ತ್ರಿದಶೇಶ್ವರ್ಯೈ ನಮಃ
630. ಓಂ ತ್ರ್ಯಕ್ಷರ್ಯೈ ನಮಃ 630
631. ಓಂ ದಿವ್ಯಗಂಧಾಢ್ಯಾಯೈ ನಮಃ
632. ಓಂ ಸಿಂದೂರತಿಲಕಾಂಚಿತಾಯೈ ನಮಃ
633. ಓಂ ಉಮಾಯೈ ನಮಃ
634. ಓಂ ಶೈಲೇಂದ್ರತನಯಾಯೈ ನಮಃ
635. ಓಂ ಗೌರ್ಯೈ ನಮಃ
636. ಓಂ ಗಂಧರ್ವಸೇವಿತಾಯೈ ನಮಃ
637. ಓಂ ವಿಶ್ವಗರ್ಭಾಯೈ ನಮಃ
638. ಓಂ ಸ್ವರ್ಣಗರ್ಭಾಯೈ ನಮಃ
639. ಓಂ ಅವರದಾಯೈ ನಮಃ
640. ಓಂ ವಾಗಧೀಶ್ವರ್ಯೈ ನಮಃ 640
641. ಓಂ ಧ್ಯಾನಗಮ್ಯಾಯೈ ನಮಃ
642. ಓಂ ಅಪರಿಚ್ಛೇದ್ಯಾಯೈ ನಮಃ
643. ಓಂ ಜ್ಞಾನದಾಯೈ ನಮಃ
644. ಓಂ ಜ್ಞಾನವಿಗ್ರಹಾಯೈ ನಮಃ
645. ಓಂ ಸರ್ವವೇದಾಂತಸಂವೇದ್ಯಾಯೈ ನಮಃ
646. ಓಂ ಸತ್ಯಾನಂದಸ್ವರೂಪಿಣ್ಯೈ ನಮಃ
647. ಓಂ ಲೋಪಾಮುದ್ರಾರ್ಚಿತಾಯೈ ನಮಃ
648. ಓಂ ಲೀಲಾಕ್ಲೃಪ್ತಬ್ರಹ್ಮಾಂಡಮಂಡಲಾಯೈ ನಮಃ
649. ಓಂ ಅದೃಶ್ಯಾಯೈ ನಮಃ
650. ಓಂ ದೃಶ್ಯರಹಿತಾಯೈ ನಮಃ 650
651. ಓಂ ವಿಜ್ಞಾತ್ರ್ಯೈ ನಮಃ
652. ಓಂ ವೇದ್ಯವರ್ಜಿತಾಯೈ ನಮಃ
653. ಓಂ ಯೋಗಿನ್ಯೈ ನಮಃ
654. ಓಂ ಯೋಗದಾಯೈ ನಮಃ
655. ಓಂ ಯೋಗ್ಯಾಯೈ ನಮಃ
656. ಓಂ ಯೋಗಾನಂದಾಯೈ ನಮಃ
657. ಓಂ ಯುಗಂಧರಾಯೈ ನಮಃ
658. ಓಂ ಇಚ್ಛಾಶಕ್ತಿಜ್ಞಾನಶಕ್ತಿಕ್ರಿಯಾಶಕ್ತಿಸ್ವರೂಪಿಣ್ಯೈ ನಮಃ
659. ಓಂ ಸರ್ವಾಧಾರಾಯೈ ನಮಃ
660. ಓಂ ಸುಪ್ರತಿಷ್ಠಾಯೈ ನಮಃ 660
661. ಓಂ ಸದಸದ್ರೂಪಧಾರಿಣ್ಯೈ ನಮಃ
662. ಓಂ ಅಷ್ಟಮೂರ್ತ್ಯೈ ನಮಃ
663. ಓಂ ಅಜಾಜೈತ್ರ್ಯೈ ನಮಃ
664. ಓಂ ಲೋಕಯಾತ್ರಾವಿಧಾಯಿನ್ಯೈ ನಮಃ
665. ಓಂ ಏಕಾಕಿನ್ಯೈ ನಮಃ
666. ಓಂ ಭೂಮರೂಪಾಯೈ ನಮಃ
667. ಓಂ ನಿರ್ದ್ವೈತಾಯೈ ನಮಃ
668. ಓಂ ದ್ವೈತವರ್ಜಿತಾಯೈ ನಮಃ
669. ಓಂ ಅನ್ನದಾಯೈ ನಮಃ
670. ಓಂ ವಸುದಾಯೈ ನಮಃ 670
671. ಓಂ ವೃದ್ಧಾಯೈ ನಮಃ
672. ಓಂ ಬ್ರಹ್ಮಾತ್ಮೈಕ್ಯಸ್ವರೂಪಿಣ್ಯೈ ನಮಃ
673. ಓಂ ಬೃಹತ್ಯೈ ನಮಃ
674. ಓಂ ಬ್ರಾಹ್ಮಣ್ಯೈ ನಮಃ
675. ಓಂ ಬ್ರಾಹ್ಮ್ಯೈ ನಮಃ
676. ಓಂ ಬ್ರಹ್ಮಾನಂದಾಯೈ ನಮಃ
677. ಓಂ ಬಲಿಪ್ರಿಯಾಯೈ ನಮಃ
678. ಓಂ ಭಾಷಾರೂಪಾಯೈ ನಮಃ
679. ಓಂ ಬೃಹತ್ಸೇನಾಯೈ ನಮಃ
680. ಓಂ ಭಾವಾಭಾವವಿವರ್ಜಿತಾಯೈ ನಮಃ 680
681. ಓಂ ಸುಖಾರಾಧ್ಯಾಯೈ ನಮಃ
682. ಓಂ ಶುಭಕರ್ಯೈ ನಮಃ
683. ಓಂ ಶೋಭನಾಸುಲಭಾಗತ್ಯೈ ನಮಃ
684. ಓಂ ರಾಜರಾಜೇಶ್ವರ್ಯೈ ನಮಃ
685. ಓಂ ರಾಜ್ಯದಾಯಿನ್ಯೈ ನಮಃ
686. ಓಂ ರಾಜ್ಯವಲ್ಲಭಾಯೈ ನಮಃ
687. ಓಂ ರಾಜತ್ಕೃಪಾಯೈ ನಮಃ
688. ಓಂ ರಾಜಪೀಠನಿವೇಶಿತನಿಜಾಶ್ರಿತಾಯೈ ನಮಃ
689. ಓಂ ರಾಜ್ಯಲಕ್ಷ್ಮ್ಯೈ ನಮಃ
690. ಓಂ ಕೋಶನಾಥಾಯೈ ನಮಃ 690
691. ಓಂ ಚತುರಂಗಬಲೇಶ್ವರ್ಯೈ ನಮಃ
692. ಓಂ ಸಾಮ್ರಾಜ್ಯದಾಯಿನ್ಯೈ ನಮಃ
693. ಓಂ ಸತ್ಯಸಂಧಾಯೈ ನಮಃ
694. ಓಂ ಸಾಗರಮೇಖಲಾಯೈ ನಮಃ
695. ಓಂ ದೀಕ್ಷಿತಾಯೈ ನಮಃ
696. ಓಂ ದೈತ್ಯಶಮನ್ಯೈ ನಮಃ
697. ಓಂ ಸರ್ವಲೋಕವಶಂಕರ್ಯೈ ನಮಃ
698. ಓಂ ಸರ್ವಾರ್ಥದಾತ್ರ್ಯೈ ನಮಃ
699. ಓಂ ಸಾವಿತ್ರ್ಯೈ ನಮಃ
700. ಓಂ ಸಚ್ಚಿದಾನಂದರೂಪಿಣ್ಯೈ ನಮಃ 700
701. ಓಂ ದೇಶಕಾಲಾಪರಿಚ್ಛಿನ್ನಾಯೈ ನಮಃ
702. ಓಂ ಸರ್ವಗಾಯೈ ನಮಃ
703. ಓಂ ಸರ್ವಮೋಹಿನ್ಯೈ ನಮಃ
704. ಓಂ ಸರಸ್ವತ್ಯೈ ನಮಃ
705. ಓಂ ಶಾಸ್ತ್ರಮಯ್ಯೈ ನಮಃ
706. ಓಂ ಗುಹಾಂಬಾಯೈ ನಮಃ
707. ಓಂ ಗುಹ್ಯರೂಪಿಣ್ಯೈ ನಮಃ
708. ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ
709. ಓಂ ಸದಾಶಿವಪತಿವ್ರತಾಯೈ ನಮಃ
710. ಓಂ ಸಂಪ್ರದಾಯೇಶ್ವರ್ಯೈ ನಮಃ 710
711. ಓಂ ಸಾಧುನೇ ನಮಃ
712. ಓಂ ಯೈ ನಮಃ
713. ಓಂ ಗುರುಮಂಡಲರೂಪಿಣ್ಯೈ ನಮಃ
714. ಓಂ ಕುಲೋತ್ತೀರ್ಣಾಯೈ ನಮಃ
715. ಓಂ ಭಗಾರಾಧ್ಯಾಯೈ ನಮಃ
716. ಓಂ ಮಾಯಾಯೈ ನಮಃ
717. ಓಂ ಮಧುಮತ್ಯೈ ನಮಃ
718. ಓಂ ಮಹ್ಯೈ ನಮಃ
719. ಓಂ ಗಣಾಂಬಾಯೈ ನಮಃ
720. ಓಂ ಗುಹ್ಯಕಾರಾಧ್ಯಾಯೈ ನಮಃ 720
721. ಓಂ ಕೋಮಲಾಂಗ್ಯೈ ನಮಃ
722. ಓಂ ಗುರುಪ್ರಿಯಾಯೈ ನಮಃ
723. ಓಂ ಸ್ವತಂತ್ರಾಯೈ ನಮಃ
724. ಓಂ ಸರ್ವತಂತ್ರೇಶ್ಯೈ ನಮಃ
725. ಓಂ ದಕ್ಷಿಣಾಮೂರ್ತಿರೂಪಿಣ್ಯೈ ನಮಃ
726. ಓಂ ಸನಕಾದಿಸಮಾರಾಧ್ಯಾಯೈ ನಮಃ
727. ಓಂ ಶಿವಜ್ಞಾನಪ್ರದಾಯಿನ್ಯೈ ನಮಃ
728. ಓಂ ಚಿತ್ಕಲಾಯೈ ನಮಃ
729. ಓಂ ಆನಂದಕಲಿಕಾಯೈ ನಮಃ
730. ಓಂ ಪ್ರೇಮರೂಪಾಯೈ ನಮಃ 730
731. ಓಂ ಪ್ರಿಯಂಕರ್ಯೈ ನಮಃ
732. ಓಂ ನಾಮಪಾರಾಯಣಪ್ರೀತಾಯೈ ನಮಃ
733. ಓಂ ನಂದಿವಿದ್ಯಾಯೈ ನಮಃ
734. ಓಂ ನಟೇಶ್ವರ್ಯೈ ನಮಃ
735. ಓಂ ಮಿಥ್ಯಾಜಗದಧಿಷ್ಠಾನಾಯೈ ನಮಃ
736. ಓಂ ಮುಕ್ತಿದಾಯೈ ನಮಃ
737. ಓಂ ಮುಕ್ತಿರೂಪಿಣ್ಯೈ ನಮಃ
738. ಓಂ ಲಾಸ್ಯಪ್ರಿಯಾಯೈ ನಮಃ
739. ಓಂ ಲಯಕರ್ಯೈ ನಮಃ
740. ಓಂ ಲಜ್ಜಾಯೈ ನಮಃ 740
741. ಓಂ ರಂಭಾದಿವಂದಿತಾಯೈ ನಮಃ
742. ಓಂ ಭವದಾವಸುಧಾವೃಷ್ಟ್ಯೈ ನಮಃ
743. ಓಂ ಪಾಪಾರಣ್ಯದವಾನಲಾಯೈ ನಮಃ
744. ಓಂ ದೌರ್ಭಾಗ್ಯತೂಲವಾತೂಲಾಯೈ ನಮಃ
745. ಓಂ ಜರಾಧ್ವಾಂತರವಿಪ್ರಭಾಯೈ ನಮಃ
746. ಓಂ ಭಾಗ್ಯಾಬ್ಧಿಚಂದ್ರಿಕಾಯೈ ನಮಃ
747. ಓಂ ಭಕ್ತಚಿತ್ತಕೇಕಿಘನಾಘನಾಯೈ ನಮಃ
748. ಓಂ ರೋಗಪರ್ವತದಂಭೋಲಯೇ ನಮಃ
749. ಓಂ ಮೃತ್ಯುದಾರುಕುಠಾರಿಕಾಯೈ ನಮಃ
750. ಓಂ ಮಹೇಶ್ವರ್ಯೈ ನಮಃ 750
751. ಓಂ ಮಹಾಕಾಲ್ಯೈ ನಮಃ
752. ಓಂ ಮಹಾಗ್ರಾಸಾಯೈ ನಮಃ
753. ಓಂ ಮಹಾಶನಾಯೈ ನಮಃ
754. ಓಂ ಅಪರ್ಣಾಯೈ ನಮಃ
755. ಓಂ ಚಂಡಿಕಾಯೈ ನಮಃ
756. ಓಂ ಚಂಡಮುಂಡಾಸುರನಿಷೂದಿನ್ಯೈ ನಮಃ
757. ಓಂ ಕ್ಷರಾಕ್ಷರಾತ್ಮಿಕಾಯೈ ನಮಃ
758. ಓಂ ಸರ್ವಲೋಕೇಶ್ಯೈ ನಮಃ
759. ಓಂ ವಿಶ್ವಧಾರಿಣ್ಯೈ ನಮಃ
760. ಓಂ ತ್ರಿವರ್ಗದಾತ್ರ್ಯೈ ನಮಃ 760
761. ಓಂ ಸುಭಗಾಯೈ ನಮಃ
762. ಓಂ ತ್ರ್ಯಂಬಕಾಯೈ ನಮಃ
763. ಓಂ ತ್ರಿಗುಣಾತ್ಮಿಕಾಯೈ ನಮಃ
764. ಓಂ ಸ್ವರ್ಗಾಪವರ್ಗದಾಯೈ ನಮಃ
765. ಓಂ ಶುದ್ಧಾಯೈ ನಮಃ
766. ಓಂ ಜಪಾಪುಷ್ಪನಿಭಾಕೃತಯೇ ನಮಃ
767. ಓಂ ಓಜೋವತ್ಯೈ ನಮಃ
768. ಓಂ ದ್ಯುತಿಧರಾಯೈ ನಮಃ
769. ಓಂ ಯಜ್ಞರೂಪಾಯೈ ನಮಃ
770. ಓಂ ಪ್ರಿಯವ್ರತಾಯೈ ನಮಃ 770
771. ಓಂ ದುರಾರಾಧ್ಯಾಯೈ ನಮಃ
772. ಓಂ ದುರಾಧರ್ಷಾಯೈ ನಮಃ
773. ಓಂ ಪಾಟಲೀಕುಸುಮಪ್ರಿಯಾಯೈ ನಮಃ
774. ಓಂ ಮಹತ್ಯೈ ನಮಃ
775. ಓಂ ಮೇರುನಿಲಯಾಯೈ ನಮಃ
776. ಓಂ ಮಂದಾರಕುಸುಮಪ್ರಿಯಾಯೈ ನಮಃ
777. ಓಂ ವೀರಾರಾಧ್ಯಾಯೈ ನಮಃ
778. ಓಂ ವಿರಾಡ್ರೂಪಾಯೈ ನಮಃ
779. ಓಂ ವಿರಜಸೇ ನಮಃ
780. ಓಂ ವಿಶ್ವತೋಮುಖ್ಯೈ ನಮಃ 780
781. ಓಂ ಪ್ರತ್ಯಗ್ರೂಪಾಯೈ ನಮಃ
782. ಓಂ ಪರಾಕಾಶಾಯೈ ನಮಃ
783. ಓಂ ಪ್ರಾಣದಾಯೈ ನಮಃ
784. ಓಂ ಪ್ರಾಣರೂಪಿಣ್ಯೈ ನಮಃ
785. ಓಂ ಮಾರ್ತಾಂಡಭೈರವಾರಾಧ್ಯಾಯೈ ನಮಃ
786. ಓಂ ಮಂತ್ರಿಣೀನ್ಯಸ್ತರಾಜ್ಯಧುರೇ ನಮಃ
787. ಓಂ ತ್ರಿಪುರೇಶ್ಯೈ ನಮಃ
788. ಓಂ ಜಯತ್ಸೇನಾಯೈ ನಮಃ
789. ಓಂ ನಿಸ್ತ್ರೈಗುಣ್ಯಾಯೈ ನಮಃ
790. ಓಂ ಪರಾಪರಾಯೈ ನಮಃ 790
791. ಓಂ ಸತ್ಯಜ್ಞಾನಾನಂದರೂಪಾಯೈ ನಮಃ
792. ಓಂ ಸಾಮರಸ್ಯಪರಾಯಣಾಯೈ ನಮಃ
793. ಓಂ ಕಪರ್ದಿನ್ಯೈ ನಮಃ
794. ಓಂ ಕಲಾಮಾಲಾಯೈ ನಮಃ
795. ಓಂ ಕಾಮದುಘೇ ನಮಃ
796. ಓಂ ಕಾಮರೂಪಿಣ್ಯೈ ನಮಃ
797. ಓಂ ಕಲಾನಿಧಯೇ ನಮಃ
798. ಓಂ ಕಾವ್ಯಕಲಾಯೈ ನಮಃ
799. ಓಂ ರಸಜ್ಞಾಯೈ ನಮಃ
800. ಓಂ ರಸಶೇವಧಯೇ ನಮಃ 800
801. ಓಂ ಪುಷ್ಟಾಯೈ ನಮಃ
802. ಓಂ ಪುರಾತನಾಯೈ ನಮಃ
803. ಓಂ ಪೂಜ್ಯಾಯೈ ನಮಃ
804. ಓಂ ಪುಷ್ಕರಾಯೈ ನಮಃ
805. ಓಂ ಪುಷ್ಕರೇಕ್ಷಣಾಯೈ ನಮಃ
806. ಓಂ ಪರಸ್ಮೈ ಜ್ಯೋತಿಷೇ ನಮಃ
807. ಓಂ ಪರಸ್ಮೈ ಧಾಮ್ನೇ ನಮಃ
808. ಓಂ ಪರಮಾಣವೇ ನಮಃ
809. ಓಂ ಪರಾತ್ಪರಾಯೈ ನಮಃ
810. ಓಂ ಪಾಶಹಸ್ತಾಯೈ ನಮಃ 810
811. ಓಂ ಪಾಶಹಂತ್ರ್ಯೈ ನಮಃ
812. ಓಂ ಪರಮಂತ್ರವಿಭೇದಿನ್ಯೈ ನಮಃ
813. ಓಂ ಮೂರ್ತಾಯೈ ನಮಃ
814. ಓಂ ಅಮೂರ್ತಾಯೈ ನಮಃ
815. ಓಂ ಅನಿತ್ಯತೃಪ್ತಾಯೈ ನಮಃ
816. ಓಂ ಮುನಿಮಾನಸಹಂಸಿಕಾಯೈ ನಮಃ
817. ಓಂ ಸತ್ಯವ್ರತಾಯೈ ನಮಃ
818. ಓಂ ಸತ್ಯರೂಪಾಯೈ ನಮಃ
819. ಓಂ ಸರ್ವಾಂತರ್ಯಾಮಿಣ್ಯೈ ನಮಃ
820. ಓಂ ಸತ್ಯೈ ನಮಃ 820
821. ಓಂ ಬ್ರಹ್ಮಾಣ್ಯೈ ನಮಃ
822. ಓಂ ಬ್ರಹ್ಮಣೇ ನಮಃ
823. ಓಂ ಜನನ್ಯೈ ನಮಃ
824. ಓಂ ಬಹುರೂಪಾಯೈ ನಮಃ
825. ಓಂ ಬುಧಾರ್ಚಿತಾಯೈ ನಮಃ
826. ಓಂ ಪ್ರಸವಿತ್ರ್ಯೈ ನಮಃ
827. ಓಂ ಪ್ರಚಂಡಾಯೈ ನಮಃ
828. ಓಂ ಆಜ್ಞಾಯೈ ನಮಃ
829. ಓಂ ಪ್ರತಿಷ್ಠಾಯೈ ನಮಃ
830. ಓಂ ಪ್ರಕಟಾಕೃತಯೇ ನಮಃ 830
831. ಓಂ ಪ್ರಾಣೇಶ್ವರ್ಯೈ ನಮಃ
832. ಓಂ ಪ್ರಾಣದಾತ್ರ್ಯೈ ನಮಃ
833. ಓಂ ಪಂಚಾಶತ್ಪೀಠರೂಪಿಣ್ಯೈ ನಮಃ
834. ಓಂ ವಿಶೃಂಖಲಾಯೈ ನಮಃ
835. ಓಂ ವಿವಿಕ್ತಸ್ಥಾಯೈ ನಮಃ
836. ಓಂ ವೀರಮಾತ್ರೇ ನಮಃ
837. ಓಂ ವಿಯತ್ಪ್ರಸುವೇ ನಮಃ
838. ಓಂ ಮುಕುಂದಾಯೈ ನಮಃ
839. ಓಂ ಮುಕ್ತಿನಿಲಯಾಯೈ ನಮಃ
840. ಓಂ ಮೂಲವಿಗ್ರಹರೂಪಿಣ್ಯೈ ನಮಃ 840
841. ಓಂ ಭಾವಜ್ಞಾಯೈ ನಮಃ
842. ಓಂ ಭವರೋಗಘ್ನ್ಯೈ ನಮಃ
843. ಓಂ ಭವಚಕ್ರಪ್ರವರ್ತಿನ್ಯೈ ನಮಃ
844. ಓಂ ಛಂದಃಸಾರಾಯೈ ನಮಃ
845. ಓಂ ಶಾಸ್ತ್ರಸಾರಾಯೈ ನಮಃ
846. ಓಂ ಮಂತ್ರಸಾರಾಯೈ ನಮಃ
847. ಓಂ ತಲೋದರ್ಯೈ ನಮಃ
848. ಓಂ ಉದಾರಕೀರ್ತಯೇ ನಮಃ
849. ಓಂ ಉದ್ದಾಮವೈಭವಾಯೈ ನಮಃ
850. ಓಂ ವರ್ಣರೂಪಿಣ್ಯೈ ನಮಃ 850
851. ಓಂ ಜನ್ಮಮೃತ್ಯುಜರಾತಪ್ತಜನ ವಿಶ್ರಾಂತಿದಾಯಿನ್ಯೈ ನಮಃ
852. ಓಂ ಸರ್ವೋಪನಿಷದುದ್ಘುಷ್ಟಾಯೈ ನಮಃ
853. ಓಂ ಶಾಂತ್ಯತೀತಕಲಾತ್ಮಿಕಾಯೈ ನಮಃ
854. ಓಂ ಗಂಭೀರಾಯೈ ನಮಃ
855. ಓಂ ಗಗನಾಂತಸ್ಥಾಯೈ ನಮಃ
856. ಓಂ ಗರ್ವಿತಾಯೈ ನಮಃ
857. ಓಂ ಗಾನಲೋಲುಪಾಯೈ ನಮಃ
858. ಓಂ ಕಲ್ಪನಾರಹಿತಾಯೈ ನಮಃ
859. ಓಂ ಕಾಷ್ಠಾಯೈ ನಮಃ
860. ಓಂ ಅಕಾಂತಾಯೈ ನಮಃ 860
861. ಓಂ ಕಾಂತಾರ್ಧವಿಗ್ರಹಾಯೈ ನಮಃ
862. ಓಂ ಕಾರ್ಯಕಾರಣನಿರ್ಮುಕ್ತಾಯೈ ನಮಃ
863. ಓಂ ಕಾಮಕೇಲಿತರಂಗಿತಾಯೈ ನಮಃ
864. ಓಂ ಕನತ್ಕನಕತಾಟಂಕಾಯೈ ನಮಃ
865. ಓಂ ಲೀಲಾವಿಗ್ರಹಧಾರಿಣ್ಯೈ ನಮಃ
866. ಓಂ ಅಜಾಯೈ ನಮಃ
867. ಓಂ ಕ್ಷಯವಿನಿರ್ಮುಕ್ತಾಯೈ ನಮಃ
868. ಓಂ ಮುಗ್ಧಾಯೈ ನಮಃ
869. ಓಂ ಕ್ಷಿಪ್ರಪ್ರಸಾದಿನ್ಯೈ ನಮಃ
870. ಓಂ ಅಂತರ್ಮುಖಸಮಾರಾಧ್ಯಾಯೈ ನಮಃ 870
871. ಓಂ ಬಹಿರ್ಮುಖಸುದುರ್ಲಭಾಯೈ ನಮಃ
872. ಓಂ ತ್ರಯ್ಯೈ ನಮಃ
873. ಓಂ ತ್ರಿವರ್ಗನಿಲಯಾಯೈ ನಮಃ
874. ಓಂ ತ್ರಿಸ್ಥಾಯೈ ನಮಃ
875. ಓಂ ತ್ರಿಪುರಮಾಲಿನ್ಯೈ ನಮಃ
876. ಓಂ ನಿರಾಮಯಾಯೈ ನಮಃ
877. ಓಂ ನಿರಾಲಂಬಾಯೈ ನಮಃ
878. ಓಂ ಸ್ವಾತ್ಮಾರಾಮಾಯೈ ನಮಃ
879. ಓಂ ಸುಧಾಸೃತ್ಯೈ ನಮಃ
880. ಓಂ ಸಂಸಾರಪಂಕನಿರ್ಮಗ್ನ ಸಮುದ್ಧರಣಪಂಡಿತಾಯೈ ನಮಃ 880
881. ಓಂ ಯಜ್ಞಪ್ರಿಯಾಯೈ ನಮಃ
882. ಓಂ ಯಜ್ಞಕರ್ತ್ರ್ಯೈ ನಮಃ
883. ಓಂ ಯಜಮಾನಸ್ವರೂಪಿಣ್ಯೈ ನಮಃ
884. ಓಂ ಧರ್ಮಾಧಾರಾಯೈ ನಮಃ
885. ಓಂ ಧನಾಧ್ಯಕ್ಷಾಯೈ ನಮಃ
886. ಓಂ ಧನಧಾನ್ಯವಿವರ್ಧಿನ್ಯೈ ನಮಃ
887. ಓಂ ವಿಪ್ರಪ್ರಿಯಾಯೈ ನಮಃ
888. ಓಂ ವಿಪ್ರರೂಪಾಯೈ ನಮಃ
889. ಓಂ ವಿಶ್ವಭ್ರಮಣಕಾರಿಣ್ಯೈ ನಮಃ
890. ಓಂ ವಿಶ್ವಗ್ರಾಸಾಯೈ ನಮಃ 890
891. ಓಂ ವಿದ್ರುಮಾಭಾಯೈ ನಮಃ
892. ಓಂ ವೈಷ್ಣವ್ಯೈ ನಮಃ
893. ಓಂ ವಿಷ್ಣುರೂಪಿಣ್ಯೈ ನಮಃ
894. ಓಂ ಅಯೋನ್ಯೈ ನಮಃ
895. ಓಂ ಯೋನಿನಿಲಯಾಯೈ ನಮಃ
896. ಓಂ ಕೂಟಸ್ಥಾಯೈ ನಮಃ
897. ಓಂ ಕುಲರೂಪಿಣ್ಯೈ ನಮಃ
898. ಓಂ ವೀರಗೋಷ್ಠೀಪ್ರಿಯಾಯೈ ನಮಃ
899. ಓಂ ವೀರಾಯೈ ನಮಃ
900. ಓಂ ನೈಷ್ಕರ್ಮ್ಯಾಯೈ ನಮಃ 900
901. ಓಂ ನಾದರೂಪಿಣ್ಯೈ ನಮಃ
902. ಓಂ ವಿಜ್ಞಾನಕಲನಾಯೈ ನಮಃ
903. ಓಂ ಕಲ್ಯಾಯೈ ನಮಃ
904. ಓಂ ವಿದಗ್ಧಾಯೈ ನಮಃ
905. ಓಂ ಬೈಂದವಾಸನಾಯೈ ನಮಃ
906. ಓಂ ತತ್ತ್ವಾಧಿಕಾಯೈ ನಮಃ
907. ಓಂ ತತ್ತ್ವಮಯ್ಯೈ ನಮಃ
908. ಓಂ ತತ್ತ್ವಮರ್ಥಸ್ವರೂಪಿಣ್ಯೈ ನಮಃ
909. ಓಂ ಸಾಮಗಾನಪ್ರಿಯಾಯೈ ನಮಃ
910. ಓಂ ಸೌಮ್ಯಾಯೈ ನಮಃ 910
911. ಓಂ ಸದಾಶಿವಕುಟುಂಬಿನ್ಯೈ ನಮಃ
912. ಓಂ ಸವ್ಯಾಪಸವ್ಯಮಾರ್ಗಸ್ಥಾಯೈ ನಮಃ
913. ಓಂ ಸರ್ವಾಪದ್ವಿನಿವಾರಿಣ್ಯೈ ನಮಃ
914. ಓಂ ಸ್ವಸ್ಥಾಯೈ ನಮಃ
915. ಓಂ ಸ್ವಭಾವಮಧುರಾಯೈ ನಮಃ
916. ಓಂ ಧೀರಾಯೈ ನಮಃ
917. ಓಂ ಧೀರಸಮರ್ಚಿತಾಯೈ ನಮಃ
918. ಓಂ ಚೈತನ್ಯಾರ್ಘ್ಯಸಮಾರಾಧ್ಯಾಯೈ ನಮಃ
919. ಓಂ ಚೈತನ್ಯಕುಸುಮಪ್ರಿಯಾಯೈ ನಮಃ
920. ಓಂ ಸದೋದಿತಾಯೈ ನಮಃ 920
921. ಓಂ ಸದಾತುಷ್ಟಾಯೈ ನಮಃ
922. ಓಂ ತರುಣಾದಿತ್ಯಪಾಟಲಾಯೈ ನಮಃ
923. ಓಂ ದಕ್ಷಿಣಾದಕ್ಷಿಣಾರಾಧ್ಯಾಯೈ ನಮಃ
924. ಓಂ ದರಸ್ಮೇರಮುಖಾಂಬುಜಾಯೈ ನಮಃ
925. ಓಂ ಕೌಲಿನೀಕೇವಲಾಯೈ ನಮಃ
926. ಓಂ ಅನರ್ಘ್ಯ ಕೈವಲ್ಯಪದದಾಯಿನ್ಯೈ ನಮಃ
927. ಓಂ ಸ್ತೋತ್ರಪ್ರಿಯಾಯೈ ನಮಃ
928. ಓಂ ಸ್ತುತಿಮತ್ಯೈ ನಮಃ
929. ಓಂ ಶ್ರುತಿಸಂಸ್ತುತವೈಭವಾಯೈ ನಮಃ
930. ಓಂ ಮನಸ್ವಿನ್ಯೈ ನಮಃ 930
931. ಓಂ ಮಾನವತ್ಯೈ ನಮಃ
932. ಓಂ ಮಹೇಶ್ಯೈ ನಮಃ
933. ಓಂ ಮಂಗಲಾಕೃತಯೇ ನಮಃ
934. ಓಂ ವಿಶ್ವಮಾತ್ರೇ ನಮಃ
935. ಓಂ ಜಗದ್ಧಾತ್ರ್ಯೈ ನಮಃ
936. ಓಂ ವಿಶಾಲಾಕ್ಷ್ಯೈ ನಮಃ
937. ಓಂ ವಿರಾಗಿಣ್ಯೈ ನಮಃ
938. ಓಂ ಪ್ರಗಲ್ಭಾಯೈ ನಮಃ
939. ಓಂ ಪರಮೋದಾರಾಯೈ ನಮಃ
940. ಓಂ ಪರಾಮೋದಾಯೈ ನಮಃ 940
941. ಓಂ ಮನೋಮಯ್ಯೈ ನಮಃ
942. ಓಂ ವ್ಯೋಮಕೇಶ್ಯೈ ನಮಃ
943. ಓಂ ವಿಮಾನಸ್ಥಾಯೈ ನಮಃ
944. ಓಂ ವಜ್ರಿಣ್ಯೈ ನಮಃ
945. ಓಂ ವಾಮಕೇಶ್ವರ್ಯೈ ನಮಃ
946. ಓಂ ಪಂಚಯಜ್ಞಪ್ರಿಯಾಯೈ ನಮಃ
947. ಓಂ ಪಂಚಪ್ರೇತಮಂಚಾಧಿಶಾಯಿನ್ಯೈ ನಮಃ
948. ಓಂ ಪಂಚಮ್ಯೈ ನಮಃ
949. ಓಂ ಪಂಚಭೂತೇಶ್ಯೈ ನಮಃ
950. ಓಂ ಪಂಚಸಂಖ್ಯೋಪಚಾರಿಣ್ಯೈ ನಮಃ 950
951. ಓಂ ಶಾಶ್ವತ್ಯೈ ನಮಃ
952. ಓಂ ಶಾಶ್ವತೈಶ್ವರ್ಯಾಯೈ ನಮಃ
953. ಓಂ ಶರ್ಮದಾಯೈ ನಮಃ
954. ಓಂ ಶಂಭುಮೋಹಿನ್ಯೈ ನಮಃ
955. ಓಂ ಧರಾಯೈ ನಮಃ
956. ಓಂ ಧರಸುತಾಯೈ ನಮಃ
957. ಓಂ ಧನ್ಯಾಯೈ ನಮಃ
958. ಓಂ ಧರ್ಮಿಣ್ಯೈ ನಮಃ
959. ಓಂ ಧರ್ಮವರ್ಧಿನ್ಯೈ ನಮಃ
960. ಓಂ ಲೋಕಾತೀತಾಯೈ ನಮಃ 960
961. ಓಂ ಗುಣಾತೀತಾಯೈ ನಮಃ
962. ಓಂ ಸರ್ವಾತೀತಾಯೈ ನಮಃ
963. ಓಂ ಶಮಾತ್ಮಿಕಾಯೈ ನಮಃ
964. ಓಂ ಬಂಧೂಕಕುಸುಮಪ್ರಖ್ಯಾಯೈ ನಮಃ
965. ಓಂ ಬಾಲಾಯೈ ನಮಃ
966. ಓಂ ಲೀಲಾವಿನೋದಿನ್ಯೈ ನಮಃ
967. ಓಂ ಸುಮಂಗಲ್ಯೈ ನಮಃ
968. ಓಂ ಸುಖಕರ್ಯೈ ನಮಃ
969. ಓಂ ಸುವೇಷಾಢ್ಯಾಯೈ ನಮಃ
970. ಓಂ ಸುವಾಸಿನ್ಯೈ ನಮಃ 970
971. ಓಂ ಸುವಾಸಿನ್ಯರ್ಚನಪ್ರೀತಾಯೈ ನಮಃ
972. ಓಂ ಆಶೋಭನಾಯೈ ನಮಃ
973. ಓಂ ಶುದ್ಧಮಾನಸಾಯೈ ನಮಃ
974. ಓಂ ಬಿಂದುತರ್ಪಣಸಂತುಷ್ಟಾಯೈ ನಮಃ
975. ಓಂ ಪೂರ್ವಜಾಯೈ ನಮಃ
976. ಓಂ ತ್ರಿಪುರಾಂಬಿಕಾಯೈ ನಮಃ
977. ಓಂ ದಶಮುದ್ರಾಸಮಾರಾಧ್ಯಾಯೈ ನಮಃ
978. ಓಂ ತ್ರಿಪುರಾಶ್ರೀವಶಂಕರ್ಯೈ ನಮಃ
979. ಓಂ ಜ್ಞಾನಮುದ್ರಾಯೈ ನಮಃ
980. ಓಂ ಜ್ಞಾನಗಮ್ಯಾಯೈ ನಮಃ 980
981. ಓಂ ಜ್ಞಾನಜ್ಞೇಯಸ್ವರೂಪಿಣ್ಯೈ ನಮಃ
982. ಓಂ ಯೋನಿಮುದ್ರಾಯೈ ನಮಃ
983. ಓಂ ತ್ರಿಖಂಡೇಶ್ಯೈ ನಮಃ
984. ಓಂ ತ್ರಿಗುಣಾಯೈ ನಮಃ
985. ಓಂ ಅಂಬಾಯೈ ನಮಃ
986. ಓಂ ತ್ರಿಕೋಣಗಾಯೈ ನಮಃ
987. ಓಂ ಅನಘಾಯೈ ನಮಃ
988. ಓಂ ಅದ್ಭುತಚಾರಿತ್ರಾಯೈ ನಮಃ
989. ಓಂ ವಾಂಛಿತಾರ್ಥಪ್ರದಾಯಿನ್ಯೈ ನಮಃ
990. ಓಂ ಅಭ್ಯಾಸಾತಿಶಯಜ್ಞಾತಾಯೈ ನಮಃ 990
991. ಓಂ ಷಡಧ್ವಾತೀತರೂಪಿಣ್ಯೈ ನಮಃ
992. ಓಂ ಅವ್ಯಾಜಕರುಣಾಮೂರ್ತಯೇ ನಮಃ
993. ಓಂ ಅಜ್ಞಾನಧ್ವಾಂತದೀಪಿಕಾಯೈ ನಮಃ
994. ಓಂ ಆಬಾಲಗೋಪವಿದಿತಾಯೈ ನಮಃ
995. ಓಂ ಸರ್ವಾನುಲ್ಲಂಘ್ಯಶಾಸನಾಯೈ ನಮಃ
996. ಓಂ ಶ್ರೀಚಕ್ರರಾಜನಿಲಯಾಯೈ ನಮಃ
997. ಓಂ ಶ್ರೀಮತ್ತ್ರಿಪುರಸುಂದರ್ಯೈ ನಮಃ
998. ಓಂ ಶ್ರೀಶಿವಾಯೈ ನಮಃ
999. ಓಂ ಶಿವಶಕ್ತ್ಯೈಕ್ಯರೂಪಿಣ್ಯೈ ನಮಃ
1000. ಓಂ ಲಲಿತಾಂಬಿಕಾಯೈ ನಮಃ 1000
ಇತಿ ಶ್ರೀ ಲಲಿತಾ ದೇವಿ ಸಹಸ್ರನಾಮಾವಳಿಃ

ಅರ್ಥ

ಶ್ರೀ ಲಲಿತಾ ಸಹಸ್ರನಾಮಾವಳಿ ಎಂದರೆ ಬ್ರಹ್ಮಾಂಡ ಪುರಾಣದ ಲಲಿತಾ ಸಹಸ್ರನಾಮ ಸ್ತೋತ್ರವನ್ನು ಅರ್ಚನೆಗೆ ಅನುಕೂಲವಾಗುವಂತೆ ಒಂದೊಂದು ನಾಮವಾಗಿ ಬಿಡಿಸಿದ ರೂಪ. ಪ್ರತಿ ನಾಮಕ್ಕೂ ಮೊದಲು ಓಂ, ಕೊನೆಯಲ್ಲಿ ನಮಃ ಸೇರಿಸಲಾಗುತ್ತದೆ. ಹಯಗ್ರೀವರು ಅಗಸ್ತ್ಯರಿಗೆ ಉಪದೇಶಿಸಿದ ಈ ನಾಮಗಳನ್ನು ವಾಗ್ದೇವತೆಗಳು ರಚಿಸಿದರು ಎಂದು ಪುರಾಣವೇ ಹೇಳುತ್ತದೆ.

ನಾಮಗಳ ಸರಣಿ

ಮೊದಲ ನಾಮ ಓಂ ಐಂ ಹ್ರೀಂ ಶ್ರೀಂ ಶ್ರೀಮಾತ್ರೇ ನಮಃ. ಶ್ರೀಮಾತಾ ಎಂದರೆ ತಾಯಿ, ಶ್ರೀಮಹಾರಾಜ್ಞೀ ಎಂದರೆ ಸಾಮ್ರಾಜ್ಞಿ. ಚಿದಗ್ನಿಕುಂಡಸಂಭೂತಾ ಎಂಬ ನಾಲ್ಕನೇ ನಾಮ ಅವಳು ಜ್ಞಾನದ ಅಗ್ನಿಕುಂಡದಿಂದ ದೇವಕಾರ್ಯಕ್ಕಾಗಿ ಉದಿಸಿದಳು ಎನ್ನುತ್ತದೆ. ಮುಂದೆ ಅವಳ ಕೈಯ ಪಾಶ, ಅಂಕುಶ, ಕಬ್ಬಿನ ಬಿಲ್ಲು ಮತ್ತು ಐದು ಬಾಣಗಳು ಬರುತ್ತವೆ. ಪಾಶ ರಾಗ, ಅಂಕುಶ ಕ್ರೋಧ, ಬಿಲ್ಲು ಮನಸ್ಸು ಎಂದು ನಾಮಗಳೇ ಅರ್ಥ ಬಿಡಿಸಿ ಹೇಳುತ್ತವೆ.

13ರಿಂದ 51ರವರೆಗೆ ಕೇಶಾದಿ ಪಾದಾಂತ ವರ್ಣನೆ ಇದೆ. ನಂತರ ಮೇರು ಶಿಖರದ ಶ್ರೀನಗರದಲ್ಲಿ, ಚಿಂತಾಮಣಿ ಗೃಹದಲ್ಲಿ, ಕದಂಬ ವನದಲ್ಲಿ ಅವಳ ನಿವಾಸ ವರ್ಣಿತವಾಗಿದೆ. 65ರಿಂದ 82ರವರೆಗೆ ಭಂಡಾಸುರ ವಧೆಯ ಕಥೆ; ಅದರ ಬೆನ್ನಲ್ಲೇ ಹರನ ನೇತ್ರಾಗ್ನಿಯಿಂದ ಸುಟ್ಟ ಮನ್ಮಥನನ್ನು ಬದುಕಿಸಿದ ಸಂಜೀವಿನಿ ಎಂಬ ನಾಮ. ಇನ್ನೂರ ಐವತ್ತರ ಆಸುಪಾಸಿನಲ್ಲಿ ಜಾಗರಿಣೀ, ಸುಪ್ತಾ, ತುರ್ಯಾ ಎಂಬ ನಾಮಗಳು ಅವಳನ್ನು ಎಚ್ಚರ, ಕನಸು, ನಿದ್ರೆ ಮತ್ತು ಅವುಗಳನ್ನು ಮೀರಿದ ಸ್ಥಿತಿಯಾಗಿ ಕಾಣುತ್ತವೆ.

ಪಠಣದ ಸಂದರ್ಭ

ಶುಕ್ರವಾರ, ಹುಣ್ಣಿಮೆ ಮತ್ತು ನವರಾತ್ರಿಯಲ್ಲಿ ಕುಂಕುಮಾರ್ಚನೆಗೆ ಹೆಚ್ಚಾಗಿ ಈ ನಾಮಾವಳಿಯನ್ನೇ ಬಳಸುತ್ತಾರೆ. ನಾಮಗಳ ಅರ್ಥ ತಿಳಿಯಲು ಭಾಸ್ಕರರಾಯರ ಸೌಭಾಗ್ಯಭಾಸ್ಕರ ಭಾಷ್ಯವನ್ನು ಪ್ರಮಾಣ ಗ್ರಂಥವಾಗಿ ಓದುತ್ತಾರೆ. ಪ್ರತಿ ನಾಮಕ್ಕೂ ಒಂದು ಚಿಟಿಕೆ ಕುಂಕುಮ ಅರ್ಪಿಸುತ್ತಾ ಸಾವಿರ ನಾಮಗಳನ್ನು ಮುಗಿಸಲು ಸುಮಾರು ಒಂದು ಗಂಟೆ ಹಿಡಿಯುತ್ತದೆ.

ಸಾಮಾನ್ಯ ಪ್ರಶ್ನೆಗಳು

ಶ್ರೀ ಲಲಿತಾ ಸಹಸ್ರನಾಮಾವಳಿಯ ಮೂಲ ಯಾವುದು?
ಬ್ರಹ್ಮಾಂಡ ಪುರಾಣದ ಲಲಿತೋಪಾಖ್ಯಾನದಲ್ಲಿ ಹಯಗ್ರೀವರು ಅಗಸ್ತ್ಯ ಮಹರ್ಷಿಗಳಿಗೆ ಈ ಸಾವಿರ ನಾಮಗಳನ್ನು ಉಪದೇಶಿಸುತ್ತಾರೆ. ದೇವಿಯ ಅಪ್ಪಣೆಯಂತೆ ವಶಿನೀ ಮೊದಲಾದ ವಾಗ್ದೇವತೆಗಳು ಈ ನಾಮಗಳನ್ನು ರಚಿಸಿದರು ಎಂದು ಅದೇ ಗ್ರಂಥ ಹೇಳುತ್ತದೆ.
ಲಲಿತಾ ಸಹಸ್ರನಾಮಾವಳಿಯಿಂದ ಕುಂಕುಮಾರ್ಚನೆ ಹೇಗೆ ಮಾಡುತ್ತಾರೆ?
ಓಂ ಶ್ರೀಮಾತ್ರೇ ನಮಃ ಎಂಬಂತೆ ಪ್ರತಿ ನಾಮವನ್ನು ಹೇಳಿದಾಗ ಒಂದು ಚಿಟಿಕೆ ಕುಂಕುಮವನ್ನು ದೇವಿಯ ಪಾದಕ್ಕೆ ಅಥವಾ ಶ್ರೀಚಕ್ರಕ್ಕೆ ಅರ್ಪಿಸುತ್ತಾರೆ. ಸಾವಿರ ನಾಮಗಳ ಅರ್ಚನೆ ಮುಗಿಯಲು ಸಾಮಾನ್ಯವಾಗಿ ಮುಕ್ಕಾಲು ಗಂಟೆಯಿಂದ ಒಂದು ಗಂಟೆ ಹಿಡಿಯುತ್ತದೆ.
ಲಲಿತಾ ಸಹಸ್ರನಾಮಾವಳಿಯ 13ರಿಂದ 51ರವರೆಗಿನ ನಾಮಗಳು ಏನನ್ನು ವರ್ಣಿಸುತ್ತವೆ?
ಈ ನಾಮಗಳು ದೇವಿಯ ರೂಪವನ್ನು ಕೂದಲಿನಿಂದ ಪಾದದವರೆಗೆ ವರ್ಣಿಸುತ್ತವೆ, ಇದನ್ನು ಕೇಶಾದಿ ಪಾದಾಂತ ವರ್ಣನೆ ಎನ್ನುತ್ತಾರೆ. ಚಂಪಕ, ಅಶೋಕ, ಪುನ್ನಾಗ ಹೂಗಳನ್ನು ಮುಡಿದ ಕೇಶರಾಶಿಯಿಂದ ಆರಂಭವಾಗಿ ಮಣಿಮಂಜೀರ ತೊಟ್ಟ ಪಾದಕಮಲಗಳವರೆಗೆ ವರ್ಣನೆ ಸಾಗುತ್ತದೆ.
ಲಲಿತಾ ಸಹಸ್ರನಾಮದಲ್ಲಿ ಭಂಡಾಸುರ ಯುದ್ಧದ ಕಥೆ ಎಲ್ಲಿ ಬರುತ್ತದೆ?
ಸುಮಾರು 65ನೇ ನಾಮದಿಂದ 82ನೇ ನಾಮದವರೆಗೆ ಭಂಡಾಸುರನೊಂದಿಗಿನ ಯುದ್ಧ ಸಂಕ್ಷಿಪ್ತವಾಗಿ ಬರುತ್ತದೆ. ಬಾಲೆ, ಮಂತ್ರಿಣಿ, ವಾರಾಹಿಯರ ವಿಜಯಗಳ ನಂತರ ಕಾಮೇಶ್ವರಾಸ್ತ್ರದಿಂದ ಭಂಡಾಸುರನು ತನ್ನ ನಗರ ಸಹಿತ ಸುಟ್ಟುಹೋಗುತ್ತಾನೆ.
ಲಲಿತಾ ಸಹಸ್ರನಾಮಾವಳಿಯನ್ನು ಯಾವ ದಿನಗಳಲ್ಲಿ ಪಠಿಸುವುದು ರೂಢಿ?
ಶುಕ್ರವಾರ, ಹುಣ್ಣಿಮೆ ಮತ್ತು ನವರಾತ್ರಿಯ ಒಂಬತ್ತು ದಿನಗಳು ಕರ್ನಾಟಕದ ಮನೆಗಳಲ್ಲಿ ಈ ಪಾರಾಯಣಕ್ಕೆ ವಿಶೇಷ ದಿನಗಳು. ಶ್ರೀವಿದ್ಯಾ ಉಪಾಸಕರು ಶ್ರೀಚಕ್ರ ಪೂಜೆಯೊಂದಿಗೆ ಇದನ್ನು ಪ್ರತಿದಿನವೂ ಪಠಿಸುತ್ತಾರೆ.

Comments

Please login to leave a comment

Loading comments...